ಅಮೆರಿಕದ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೊಬೆಲ್

ಗುರುತ್ವಾಕರ್ಷಣೆ ತರಂಗಗಳ ಕುರಿತು ಸಂಶೋಧನೆಗಾಗಿ ಅಮೆರಿಕದ ಮೂವರು ವಿಜ್ಞಾನಿಗಳಾದ ರೇನರ್ ವೀಸ್,....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸ್ಟಾಕ್‌ಹೋಮ್: ಗುರುತ್ವಾಕರ್ಷಣೆ ತರಂಗಗಳ ಕುರಿತು ಸಂಶೋಧನೆಗಾಗಿ ಅಮೆರಿಕದ ಮೂವರು ವಿಜ್ಞಾನಿಗಳಾದ ರೇನರ್ ವೀಸ್, ಬ್ಯಾರಿ ಬೈಷ್, ಕಿಪ್ ತೋರ್ನ್ವ  ಅವರಿಗೆ 2017ರ ಸಾಲಿನ  ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಲಭಿಸಿದೆ.
ಗುರುತ್ವಾಕರ್ಷಣೆ ತರಂಗಗಳ ಕುರಿತ ಸಂಶೋಧನೆಯಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಕ್ಕಾಗಿ ರೇನರ್ ವೀಸ್ ಅವರಿಗೆ ಪ್ರಶಸ್ತಿ ಮೊತ್ತದಲ್ಲಿ ಅರ್ಧ ಹಣ ಹಾಗೂ ಉಳಿದಿಬ್ಬರು ಉಳಿದರ್ಧ ಹಣ ಹಂಚಿಕೊಳ್ಳಲಿದ್ದಾರೆ.
ಗುರುತ್ವಾಕರ್ಷಣೆ ತರಂಗಗಳ ಕುರಿತಂತೆ ಅಲ್ಬರ್ಟ್ ಐನ್‌ಸ್ಟೈನ್ ಮೊದಲ ಬಾರಿಗೆ ಪರಿಕಲ್ಪನೆಯನ್ನು ನೀಡಿದ್ದರು.
ಖ್ಯಾತ ವಿಜ್ಞಾನಿ ಅಲ್ಪ್ರೆಡ್ ನೊಬಲ್ ಅವರ ನೆನಪಿಗಾಗಿ ಪ್ರತಿವರ್ಷ ವಿಜ್ಞಾನ, ಕಲೆ, ಸಾಹಿತ್ಯ, ಶಾಂತಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೋಬೆಲ್ ಪ್ರಶಸ್ತಿ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com