ಇಸ್ರೇಲ್ ಪ್ರಧಾನಿ ಬೆಂಜಮಿನ್ ಪತ್ನಿ ಸಾರಾ ವಿರುದ್ಧ ಭಷ್ಟಾಚಾರ ಆರೋಪ

ಸಾರ್ವಜನಿಕ ಹಣ ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪ ಇಸ್ರೇಲ್ ನ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಅವರ ಪತ್ನಿ ಸಾರಾ ನೇತನ್ಯಾಹು ವಿರುದ್ಧ ಕೇಳಿಬಂದಿದೆ...
ಸಾರಾ ನೇತನ್ಯಾಹು-ಬೆಂಜಮಿನ್ ನೇತನ್ಯಾಹು
ಸಾರಾ ನೇತನ್ಯಾಹು-ಬೆಂಜಮಿನ್ ನೇತನ್ಯಾಹು
ಜೆರುಸೆಲಂ: ಸಾರ್ವಜನಿಕ ಹಣ ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪ ಇಸ್ರೇಲ್ ನ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಅವರ ಪತ್ನಿ ಸಾರಾ ನೇತನ್ಯಾಹು ವಿರುದ್ಧ ಕೇಳಿಬಂದಿದೆ. 
ಈ ಸಂಬಂಧ ಇಸ್ರೇಲ್ ನ ಅಟಾರ್ನಿ ಜನರಲ್ ಅವಿಚಿ ಮ್ಯಾಂಡಲ್ಬ್ಲಿಟ್ ಅವರು ಸಾರಾ ವಿರುದ್ಧ ಭ್ರಷ್ಟಾಚಾರ, ವಂಚನೆ, ನಂಬಿಕೆ ದ್ರೋಹದ ವಿಚಾರಣೆಗೆ ಅನುಮತಿ ನೀಡಿದ್ದಾರೆ. 
ಸಾರಾ ವಿರುದ್ಧ 1 ಲಕ್ಷ ಅಮೆರಿಕನ್ ಡಾಲರ್ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಣವನ್ನು ಸಾರಾ ಅವರು ಪ್ರಧಾನ ಮಂತ್ರಿ ಅವರ ಅಧಿಕೃತ ನಿವಾಸದಲ್ಲಿ ಖಾಸಗಿ ಔತಣ ಕೂಟಗಳಿಗಾಗಿ ಈ ಹಣ ವ್ಯಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com