ಕಾಳಜಿಯ ಕಾರಣದಿಂದ ದ್ವೀಪರಾಷ್ಟ್ರ ಮಾಲ್ಡೀವ್ಸ್ ಅಭಿವೃದ್ಧಿ : ಪೆಂಟಾಗಾನ್

ದ್ವೀಪರಾಷ್ಟ್ರ ಮಾಲ್ಡೀವ್ಸ್ ನಲ್ಲಿ ಚೀನಾ ಬೃಹತ್ ಪ್ರಮಾಣದ ಭೂಮಿ ದೋಚುತ್ತದೆ ಎಂಬ ಆರೋಪಗಳ ಬೆನ್ನಲ್ಲೇ , ಕಾಳಜಿಯ ಕಾರಣದಲ್ಲಿ ಅಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಪೆಟಾಂಗಾನ್ ಹೇಳಿದೆ.
ಮಾಲ್ಡೀವ್ಸ್
ಮಾಲ್ಡೀವ್ಸ್
Updated on: 

ವಾಷಿಂಗ್ ಟನ್ : ದ್ವೀಪರಾಷ್ಟ್ರ ಮಾಲ್ಡೀವ್ಸ್ ನಲ್ಲಿ ಚೀನಾ  ಬೃಹತ್ ಪ್ರಮಾಣದ ಭೂಮಿ ದೋಚುತ್ತದೆ ಎಂಬ ಆರೋಪಗಳ ಬೆನ್ನಲ್ಲೇ ,  ಕಾಳಜಿಯ ಕಾರಣದಲ್ಲಿ ಅಲ್ಲಿ  ಅಭಿವೃದ್ಧಿಪಡಿಸಲಾಗುವುದು  ಎಂದು ಪೆಟಾಂಗಾನ್ ಹೇಳಿದೆ.

ಭಾರತ - ಫೆಸಿಪಿಕ್ ಕಾನೂನು  ಆಧಾರಿತ ಆದೇಶಕ್ಕೆ ಅಮೆರಿಕ ಬದ್ಧವಾಗಿದ್ದು, ಕಾಳಜಿಯ ಕಾರಣದಿಂದ ಅಭಿವೃದ್ಧಿಪಡಿಸಲಾಗುವುದು  ಎಂದು ದಕ್ಷಿಣ ಪೂರ್ವ ಉಪ ಸಹಾಯಕ ಕಾರ್ಯದರ್ಶಿ ಜಾಯ್ ಪೆಲ್ಟರ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಮಾಲ್ಡೀವ್ಸ್ ಭಾರತ ಹಿನ್ನೀರಿನ ಪ್ರದೇಶವಾಗಿದ್ದು, ಭಾರತ ಹಿತಸಕ್ತಿ ನಮಗೆ ಗೊತ್ತಿದೆ. ಮಾಲ್ಡಿವ್ಸ್ ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಹೇಗೆ ಬಗೆಹರಿಸಬಹುದು ಎಂಬುದನ್ನು ನೋಡಲಾಗುತ್ತಿದೆ. ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರದಲ್ಲಿ ಕೆಲ ಆದ್ಯತೆ ನೀಡಲಾಗಿದೆ ಎಂದು ಪೆಂಟಾಗಾನ್ ಅಧಿಕಾರಿಗಳು ಹೇಳಿದ್ದಾರೆ.

 ಮಿಲಿಟರಿ ಹೊರ ಠಾಣೆಗಾಗಿ ಚೀನಾ ಮಾಲ್ಡೀವ್ಸ್ ನಲ್ಲಿ ಭೂಮಿ ಸ್ವಾಧೀನಪಡಿಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಪಾಲನೆಗೆ ಎಲ್ಲಾ ರಾಷ್ಟ್ರಗಳು ಬೆಂಬಲ ನೀಡಿದ್ದು, ಕಾಳಜಿಯ ಕಾರಣದಿಂದಾಗಿ ಅಭಿವೃದ್ಧಿಪಡಿಸುತ್ತಿರುವುದಾಗಿ ಪೆಲ್ಟರ್ ಹೇಳಿದರು.

 ಇತ್ತೀಚಿಗೆ ಅಮೆರಿಕಾ ಪ್ರವಾಸ ಕೈಗೊಂಡಿದ್ದ ಮಾಲ್ಡೀವ್ಸ್ ಮಾಜಿ ವಿದೇಶಾಂಗ ವ್ಯವಹಾರ ಸಚಿವ ಅಹಮದ್ ನಾಸೀಮ್, ಮಾಲ್ಡೀವ್ಸ್ ನಲ್ಲಿ ಚೀನಾ ಬೃಹತ್ ಪ್ರಮಾಣದ ಭೂಮಿ ದೋಚುತ್ತಿದೆ ಎಂದು ಆರೋಪಿಸಿದ್ದರು. ಭಾರತ ಮತ್ತು ಅಮೆರಿಕಾಕ್ಕೆ ಬೆದರಿಕೆ ನೀಡುವ ನಿಟ್ಟಿನಲ್ಲಿ ಚೀನಾ ಇಂತಹ ಕೃತ್ಯದಲ್ಲಿ ತೊಡಗಿದೆ ಎಂಬಂತಹ ಮಾತುಗಳು ಕೇಳಿಬಂದಿದ್ದವು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com