ಪ್ರಸಿದ್ಧ ಪಿರಮಿಡ್ ಮೇಲೆ ಬೆತ್ತಲಾಗಿ ಸೆಕ್ಸ್ ಮಾಡಿ ಯೂಟ್ಯೂಬ್‌ಗೆ ವಿಡಿಯೋ ಅಪ್ಲೋಡ್, ವಿಡಿಯೋ ವೈರಲ್!

ಡ್ಯಾನಿಷ್ ಜೋಡಿಯೊಂದು ಈಜಿಶ್ಟ್ ನ ವಿಶ್ವ ಪ್ರಸಿದ್ಧ ಗೀಝಾ ಕುಫು ಪಿರಮಿಡ್ ಮೇಲೆ ಬಟ್ಟೆ ಬಿಚ್ಚಿ ಬೆತ್ತಲಾಗಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದು ವಿಡಿಯೋ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೈರೋ: ಡ್ಯಾನಿಷ್ ಜೋಡಿಯೊಂದು ಈಜಿಶ್ಟ್ ನ ವಿಶ್ವ ಪ್ರಸಿದ್ಧ ಗೀಝಾ ಕುಫು ಪಿರಮಿಡ್ ಮೇಲೆ ಬಟ್ಟೆ ಬಿಚ್ಚಿ ಬೆತ್ತಲಾಗಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ. 
ಪಿರಮಿಡ್ ಮೇಲೆ ಡ್ಯಾನಿಷ್ ಜೋಡಿ ಮೂರು ನಿಮಿಷಗಳ ಕಾಲ ಬಟ್ಟೆ ಬಿಚ್ಚಿ ಸೆಕ್ಸ್ ಮಾಡಿದ್ದು ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. 
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈಜಿಪ್ಟ್ ತನಿಖೆಗೆ ಆದೇಶಿಸಿದೆ. ಇನ್ನು ಈ ರೀತಿಯ ವರ್ತನೆ ಈಜಿಪ್ಟ್ ನಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಇದರಿಂದಾಗಿ ಇಲ್ಲಿನ ಪುರಾತತ್ವ ಇಲಾಖಾ ಸಚಿವ ಖಲೀದ್ ಅಲ್ ಅನಾನಿ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಇನ್ನು ಆ ಜೋಡಿಯನ್ನು ಶೀಘ್ರವೇ ಪತ್ತೆ ಮಾಡಿ ಶಿಕ್ಷಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com