ತುರ್ತು ಪರಿಸ್ಥಿತಿ ವಿಸ್ತರಣೆ ಕುರಿತ ಹೇಳಿಕೆಗೆ ಭಾರತದ ವಿರುದ್ಧ ಮಾಲ್ಡೀವ್ಸ್ ಕಿಡಿ

ಮಾಲ್ಡೀವ್ಸ್ ನಲ್ಲಿ 15 ದಿನಗಳ ಕಾಲ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು 30 ದಿನಗಳ ವರೆಗೆ ವಿಸ್ತರಿಸಿರುವುದರ ಬಗ್ಗೆ ಭಾರತ ನೀಡಿದ್ದ ಪ್ರತಿಕ್ರಿಯೆಗೆ ಮಾಲ್ಡೀವ್ಸ್ ಅಸಮಾಧಾನ
ಮಾಲ್ಡೀವ್ಸ್ ಅಧ್ಯಕ್ಷ
ಮಾಲ್ಡೀವ್ಸ್ ಅಧ್ಯಕ್ಷ
Updated on: 

ನವದೆಹಲಿ: ಮಾಲ್ಡೀವ್ಸ್ ನಲ್ಲಿ 15 ದಿನಗಳ ಕಾಲ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು 30 ದಿನಗಳ ವರೆಗೆ ವಿಸ್ತರಿಸಿರುವುದರ ಬಗ್ಗೆ ಭಾರತ ನೀಡಿದ್ದ ಪ್ರತಿಕ್ರಿಯೆಗೆ ಮಾಲ್ಡೀವ್ಸ್ ಅಸಮಾಧಾನ ವ್ಯಕ್ತಪಡಿಸಿದೆ.

ಮಾಲ್ಡೀವ್ಸ್ ನಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ಸನ್ನಿವೇಶಗಳನ್ನು ನಿರ್ಲಕ್ಷ್ಯಿಸಿ ಭಾರತ ಸರ್ಕಾರ ನೀಡಿರುವ ಹೇಳಿಕೆಯನ್ನು ಮಾಲ್ಡೀವ್ಸ್ ನ ಸರ್ಕಾರ ಗಮನಿಸಿದೆ ಎಂದು ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವ ಮೊಹಮ್ಮದ್ ಆಸಿಮ್ ಹೇಳಿಕೆ ನೀಡಿದ್ದಾರೆ.

ಮಾಲ್ಡೀವ್ಸ್ ನಲ್ಲಿ ತುರ್ತು ಪರಿಸ್ಥಿತಿಯನ್ನು 30 ದಿನಗಳ ವರೆಗೆ ವಿಸ್ತರಿಸಲು ಅಲ್ಲಿನ ಸಂಸತ್ ಒಪ್ಪಿಗೆ ಸೂಚಿಸಿದ್ದನ್ನು ಭಾರತ ಆತಂಕಕಾರಿ ಬೆಳವಣಿಗೆ ಎಂದು ಹೇಳಿತ್ತು. ಮಾಲ್ಡೀವ್ಸ್ ಸಂಸತ್ ನಿರ್ಣಯವನ್ನು ಮಾಲ್ಡೀವ್ಸ್ ನ ಪ್ರಾಸಿಕ್ಯೂಟರ್ ಜನರಲ್ ಐಶಾತ್ ಬಿಷಮ್ ಸಹ ಸಂವಿಧಾನ ವಿರೋಧಿ ಎಂದು ಹೇಳಿದ್ದರು.

ಭಾರತ ಆತಂಕ ವ್ಯಕ್ತಪಡಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಲ್ಡೀವ್ಸ್ ನ ವಿದೇಶಾಂಗ ಸಚಿವ ಭಾರತದ ವಿದೇಶಾಂಗ ಇಲಾಖೆಯ ಹೇಳಿಕೆ ಮಾಲ್ಡೀವ್ಸ್ ತುರ್ತು ಪರಿಸ್ಥಿತಿಯ ಬಗೆಗಿನ ವಾಸ್ತವಾಂಶವನ್ನು ತಿರುಚಿದ್ದು, ತುರ್ತು ಪರಿಸ್ಥಿತಿ ವಿಸ್ತರಣೆ ಕಾನೂನಾತ್ಮಕತೆ ಬಗ್ಗೆ ಭಾರತಕ್ಕೆ ಉದ್ಭವಿಸಿರುವ ಆತಂಕ ಆಧಾರ ರಹಿತ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com