18 ಸೈನಿಕರನ್ನು ಹತ್ಯೆಗೈದ ತಾಲಿಬಾನ್ ಉಗ್ರರು!

ಆಫ್ಘಾನಿಸ್ತಾನದ ಸೇನಾ ನೆಲೆ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು ಪರಿಣಾಮ 18 ಯೋಧರು ಮೃತಪಟ್ಟಿದ್ದಾರೆ...
ತಾಲಿಬಾನ್ ಉಗ್ರರು
ತಾಲಿಬಾನ್ ಉಗ್ರರು
ಕಾಬೂಲ್: ಆಫ್ಘಾನಿಸ್ತಾನದ ಸೇನಾ ನೆಲೆ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು ಪರಿಣಾಮ 18 ಯೋಧರು ಮೃತಪಟ್ಟಿದ್ದಾರೆ. 
ಭಯೋತ್ಪಾದನೆ ಪೀಡಿತ ರಾಷ್ಟ್ರದಲ್ಲಿ ಸಂಭವಿಸಿರುವ ಭಯೋತ್ಪಾದಕರ ದಾಳಿ ಅತ್ಯಂತ ಗಂಭೀರ ವಿಷಯವಾಗಿದ್ದು ಫರಾಹ್ ಪಶ್ಚಿಮ ಪ್ರಾಂತ್ಯದ ಆಫ್ಘಾನ್ ಸೇನಾ ನೆಲೆ ಮೇಲೆ ಕಳೆದ ರಾತ್ರಿ ಉಗ್ರರು ದಾಳಿ ಮಾಡಿದ್ದು 18 ಯೋಧರು ಬಲಿಯಾಗಿದ್ದಾರೆ. 
ಫರಾಹ್ ಜಿಲ್ಲೆಯ ಬಾಲಾ ಬುಲುಕ್ ನ ಸೇನಾ ನೆಲೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು ಇದರಲ್ಲಿ 18 ಯೋಧರು ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೇನಾ ವಕ್ತಾರ ದೌಲಾತ್ ವಝೀರ್ ಹೇಳಿದ್ದಾರೆ. 
ಭಯೋತ್ಪಾದಕರ ದಾಳಿಯಲ್ಲಿ ಅಮೂಲ್ಯ 18 ಯೋಧರನ್ನು ನಾವು ಕಳೆದುಕೊಂಡಿದ್ದೇವೆ. ಸದ್ಯ ಸೇನಾ ನೆಲೆಗೆ ಹೆಚ್ಚುವರಿ ಸೇನೆಯನ್ನು ರವಾನಿಸಲಾಗಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com