ವಿದೇಶ

ವಿಮಾನಗಳ ಢಿಕ್ಕಿ: ಭಾರತೀಯ ಮೂಲದ ತರಬೇತಿ ಪೈಲಟ್ ಯುವತಿ ಸೇರಿ ನಾಲ್ಕು ಮಂದಿ ಸಾವು!

ವಿಮಾನಗಳ ಢಿಕ್ಕಿ: ಭಾರತೀಯ ಮೂಲದ ತರಬೇತಿ ಪೈಲಟ್ ಯುವತಿ ಸೇರಿ ನಾಲ್ಕು ಮಂದಿ ಸಾವು!
ಸಂಗ್ರಹ ಚಿತ್ರ
Published On :
ವಾಷಿಂಗ್ಟನ್​: ತರಬೇತಿ ವಿಮಾನಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಭಾರತೀಯ ಮೂಲದ ಯುವತಿ ಸೇರಿದಂತೆ ಒಟ್ಟು ನಾಲ್ಕು ಮಂದಿ ತರಬೇತಿ ಪೈಲಟ್ ಗಳು ಸಾವನ್ನಪ್ಪಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಫ್ಲೋರಿಡಾದ ಸ್ಥಳೀಯ ವಿಮಾನ ತರಬೇತಿ ಶಾಲೆಗೆ ಸೇರಿದ ಎರಡು ಸಣ್ಣ ವಿಮಾನಗಳ ನಡುವೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದ್ದು, ಅಪಘಾತಕ್ಕೀಡಾಗ ವಿಮಾನಗಳು ಡೀನ್ ಅಂತಾರಾಷ್ಟ್ರೀಯ ವಿಮಾನ ಚಾಲನ ತರಬೇತಿ ಶಾಲೆಗೆ ಸೇರಿದ ವಿಮಾನಗಳಾಗಿದ್ದು, ಪೈಪರ್ ಪಿ-34 ಹಾಗೂ ಸೆಸ್ನಾ 172 ವಿಮಾನಗಳು ಅಪಘಾತಕ್ಕೀಡಾಗಿವೆ. ದುರ್ಘಟನೆಯಲ್ಲಿ ತರಬೇತಿ ಪಡೆಯುತ್ತಿದ್ದ 4 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 
ಮೃತರನ್ನು ಟ್ರೈನಿ ಪೈಲೆಟ್​ ನಿಶಾ ಸೇಜ್ವಾಲ್​ (19), ಜಾರ್ಜ್ ಸ್ಯಾಂಚೆಜ್ (22), ರಾಲ್ಫ್​ ನೈಟ್​ (72) ಎಂದು ಗುರುತಿಸಲಾಗಿದ್ದು, ಪೈಕಿ ನಿಶಾ ಸೇಜ್ವಾಲ್ ಎಂಬ ಟ್ರೈನಿ ಪೈಲಟ್ ಭಾರತ ಮೂಲದವರು ಎಂದು ತಿಳಿದುಬಂದಿದೆ.  ಮೃತ ನಿಶಾ ಸೇಜ್ವಾಲ್ ಕಳೆದ 2017ರ ಸೆಪ್ಟೆಂಬರ್ ​ನಲ್ಲಿ ತರಬೇತಿಗೆ ಸೇರಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಅಪಘಾತದಲ್ಲಿ ನಾಲ್ಕನೇ ವ್ಯಕ್ತ ಸಹ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದ್ದು, ಆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಒಂದು ದಶಕದಲ್ಲಿ 25ಕ್ಕೂ ಹೆಚ್ಚು ಇಂತಹ ಪ್ರಕರಣಗಳು ಈ ತರಬೇತಿ ಶಾಲೆಯಲ್ಲಿ ವರದಿಯಾಗಿದೆ ಎಂದು ಅಮೆರಿಕ ವಿಮಾನಯಾನ ವಿಭಾಗ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.