ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಭಾರತದಷ್ಟು ಸುರಕ್ಷಿತ ದೇಶ ಮತ್ತೊಂದಿಲ್ಲ: ವರದಿ

Published On :
ವಾಷಿಂಗ್ಟನ್: ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಭಾರತದಷ್ಟು ಸುರಕ್ಷಿತ ದೇಶ ಮತ್ತೊಂದಿಲ್ಲ ಎಂಬ ವಿಚಾರವನ್ನು ವರದಿಯೊಂದು ಹೇಳಿದೆ.
ತನ್ನ ಧಾರ್ಮಿಕ ಅಲ್ಪಸಂಖ್ಯಾತ ಜನಸಂಖ್ಯೆಗೆ ಭಾರತ ಸರ್ಕಾರ ಸಾಕಷ್ಟು ಭದ್ರತೆ ನೀಡುತ್ತಿದ್ದು, ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಭಾರತ ದೇಶ ಸ್ಥಿರತೆಯ ಬಲವಾಗಿದೆ ಎಂದು ವರದಿಯೊಂದು ಹೇಳಿದೆ. ಅಮೆರಿಕ ಮೂಲದ ಹಿಂದೂ ಅಮೆರಿಕನ್ ಫೌಡೇಷನ್ ಈ ವರದಿ ನೀಡಿದ್ದು, ಮೂಲಭೂತ ಇಸ್ಲಾಮಿಕ್ ಭಯೋತ್ಪಾದನೆ, ನಕ್ಸಲ್, ಮಾವೋ ಭಯೋತ್ಪಾದನೆಯನ್ನು ದಮನ ಮಾಡಿ ಪ್ರದೇಶದಲ್ಲಿ ಇನ್ನಷ್ಟು ಸ್ಥಿರತೆ ತರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭಾರತಕ್ಕೆ ಅಮೆರಿಕ ಇನ್ನಷ್ಟು ಬೆಂಬಲ ನೀಡಬೇಕಿದೆ ಎಂದು ಪ್ರತಿಷ್ಠಾನ ಪ್ರತಿಪಾದಿಸಿದೆ.
ಈ ಕುರಿತಂತೆ ಸವಿಸ್ತಾರ ದಾಖಲೆ ಬಿಡುಗಡೆ ಮಾಡಿರುವ ಪ್ರತಿಷ್ಠಾನ, ಜಾಗತಿಕ ಮಟ್ಟದ ನಾಲ್ಕು ಧರ್ಮಗಳ ಜನ್ಮಸ್ಥಳವಾದ ಭಾರತವು ಶತಮಾನಗಳ ಕಾಲ ಸಾಕಷ್ಟು ಧಾರ್ಮಿಕ, ಭಾಷಾ ಸಹಿಷ್ಣುತೆ ಬೆಳೆಸಿಕೊಂಡು ಬಂದಿದೆ. ಅಲ್ಲದೆ ಹಿಂಸಾಚಾರದಿಂದ ತಪ್ಪಿಸಿಕೊಂಡು ಬಂದವರಿಗೆ ಆಶ್ರಯವನ್ನೂ ನೀಡುತ್ತಾ ಬರುವ ಮೂಲಕ ಆದರಣನೀಯ ರಾಷ್ಟ್ರವಾಗಿದೆ. ಸರ್ಕಾರ, ಮಿಲಿಟರಿ, ನ್ಯಾಯಾಂಗದ ಎಲ್ಲ ಸ್ಥರದಲ್ಲೂ ಯಾವುದೇ ತಾರತಮ್ಯವಿಲ್ಲದೇ ಅಲ್ಪಸಂಖ್ಯಾತರಿಗೂ ಅವಕಾಶ ಕಲ್ಪಿಸಿಕೊಟ್ಟಿರುವ ಭಾರತ, ಮುಸ್ಲಿಮರು ಹಾಗು ಕ್ರಿಶ್ಚಿಯನ್ನರಿಗೆ ತಮ್ಮದೇ ಧರ್ಮಕ್ಕನುಗುಣವಾದ ಕಾನೂನಿಗೂ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಭಾರತ ಕಂಡುಕೇಳರಿಯದ ರೀತಿಯಲ್ಲಿ ತನ್ನ ಅಲ್ಪಸಂಖ್ಯಾತರನ್ನು ನೋಡಿಕೊಳ್ಳುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಇದೇ ವೇಳೆ ದೇಶದಲ್ಲಿ ಆಗಾಗಾ ಸಂಭವಿಸಿರುವ ಧಾರ್ಮಿಕ ಗಲಭೆಗಳಿಗೆ ರಾಜಕೀಯ, ಐತಿಹಾಸಿಕ ಹಾಗು ಧಾರ್ಮಿಕ ಕಾರಣಗಳಿದ್ದರೂ ಇತ್ತೀಚಿನ ದಿನಗಳಲ್ಲಿ ಇವೆಲ್ಲಾ ಸಾಕಷ್ಟು ಕಡಿಮೆಯಾಗಿವೆ. ಅಲ್ಲೊಂದು ಇಲ್ಲೊಂದು ಘಟನೆಗಳಲ್ಲಿ ಮಾತ್ರ ಮುಸ್ಲಿಮರು, ಕ್ರೈಸ್ತರು ಹಾಗು ಹಿಂದೂಗಳಿಂದ ದಾಳಿಗಳಾಗುತ್ತಿರುವ ವರದಿಗಳು ಬರುತ್ತಿವೆ ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತUSಅಮೆರಿಕWashingtonವಾಷಿಂಗ್ಟನ್Religious MinorityHindu advocacy groupಧಾರ್ಮಿಕ ಅಲ್ಪ ಸಂಖ್ಯಾತರುಹಿಂದೂ ಅಮೆರಿಕ ಪ್ರತಿಷ್ಠಾನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


