ಭಾರತ ಸೇರಿದಂತೆ ಭೂತಾನ್, ಅಫ್ಘಾನಿಸ್ಥಾನ, ಮಾರಿಷಸ್, ಬೆಲಾರುಸ್, ಕ್ಯೂಬಾ, ವೆನಿಜುವೆಲಾ ರಾಷ್ಟ್ರಗಳು ಸರಾಸಗಟಾಗಿ ವರದಿಯನ್ನು ತಿರಸ್ಕರಿಸಿವೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ರಾಯಭಾರಿ ಫಾರೂಖ್ ಅಮಿಲ್ ವರದಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರಾದರೂ ಅದಕ್ಕೆ ಯಾರೂ ಸೊಪ್ಪು ಹಾಕಲಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ವರದಿಯನ್ನು ಭಾರತ ಈಗಾಗಲೇ ತಿರಸ್ಕರಿಸಿದೆ.