ಬ್ಯಾಂಕ್ ವಂಚನೆಗೆ ನಾನು ಪೋಸ್ಟರ್ ಬಾಯ್ ಆಗಿದ್ದೇನೆ: ವಿಜಯ್ ಮಲ್ಯ

ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಬೇಕಿರುವ ವಿಜಯ್ ಮಲ್ಯಾ "ನಾನು ಬ್ಯಾಂಕ್ ಸುಸ್ತಿದಾರರ ಪೋಸ್ಟರ್ ಬಾಯ್ ಆಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಬ್ಯಾಂಕ್ ಡೀಫಾಲ್ಟ್ ನ ಪೋಸ್ಟರ್ ಬಾಯ್ ಆಗಿದ್ದೇನೆ: ವಿಜಯ್ ಮಲ್ಯಾ
ನಾನು ಬ್ಯಾಂಕ್ ಡೀಫಾಲ್ಟ್ ನ ಪೋಸ್ಟರ್ ಬಾಯ್ ಆಗಿದ್ದೇನೆ: ವಿಜಯ್ ಮಲ್ಯಾ
ನವದೆಹಲಿ: ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಬೇಕಿರುವ ವಿಜಯ್ ಮಲ್ಯಾ "ನಾನು ಬ್ಯಾಂಕ್ ಸುಸ್ತಿದಾರರ ಪೋಸ್ಟರ್ ಬಾಯ್ ಆಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
ತಮ್ಮ ಬಹುಕಾಲದ ಮೌನವನ್ನು ಮುರಿದಿರುವ ವಿಜಯ್ ಮಲ್ಯಾ, ಬ್ಯಾಂಕ್ ಸಾಲ ಮರುಪಾವತಿ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವರಿಗೆ 2016 ರ ಏ.15 ರಂದು ಪತ್ರ ಬರೆದಿದ್ದರು. ಆಡರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿಜಯ್ ಮಲ್ಯ ಹೇಳಿದ್ದಾರೆ. 
ಕಿಂಗ್ ಫಿಷರ್ ಏರ್ ಲೈನ್ಸ್ ಗಾಗಿ ಪಡೆದಿದ್ದ 9,000 ಕೋಟಿ ರೂಪಾಯಿಯನ್ನು, ಕಳ್ಳತನ ಮಾಡಿ ಪರಾರಿಯಾಗಿದ್ದೇನೆ ಎಂಬಂತೆ ರಾಜಕಾರಣಿಗಳು ಹಾಗೂ ಮಾಧ್ಯಮದವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕೆಲವೊಂದು ಬ್ಯಾಂಕ್ ಗಳು ನನ್ನನ್ನು ಉದ್ದೇಶಪೂರ್ವಕವಾಗಿ ಸುಸ್ತಿದಾರನೆಂಬ ಹಣೆಪಟ್ಟಿ ಕೊಟ್ಟಿವೆ ಎಂದು ಮಲ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com