ಕೈರೋ: ಪ್ರವಾದಿ ಮೊಹಮ್ಮದರ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ವಿಡಿಯೋವೊಂದು ಪ್ರಸಾರವಾದ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಯೂ ಟ್ಯೂಬ್ ಬ್ಯಾನ್ ಮಾಡಿ ಈಜಿಪ್ಟ್ ಹೈಕೋರ್ಟ್ ಆದೇಶ ನೀಡಿದೆ.
ಇದೇ ಅಂತಿಮ ಆದೇಶವಾಗಿದ್ದು, ಪುನರ್ ಅರ್ಜಿ ಸಲ್ಲಿಸದಂತೆ ನ್ಯಾಯಾಲಯ ಯೂ ಟ್ಯೂಬ್ ಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇದೇ ಕಾರಣದಿಂದ 2013 ಫೆಬ್ರವರಿಯಲ್ಲಿಯೂ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವಾಲಯ ಒಂದು ತಿಂಗಳ ಕಾಲ ಯು ಟ್ಯೂಬ್ ಸ್ಥಗಿತಗೊಳಿಸುವಂತೆ ಸ್ಥಳೀಯ ನ್ಯಾಯಾಲಯ ಆದೇಶ ನೀಡಿತ್ತು.
ಆದರೆ, ಯೂ ಟ್ಯೂಬ್ ಸ್ಥಗಿತದಿಂದ ಈಜಿಪ್ಟ್ ನಲ್ಲಿ ಉದ್ಯೋಗ ಕೊರತೆ ಉಂಟಾಗುವುದಲ್ಲದೇ, ಗೂಗಲ್ ಇಂಟರ್ನೆಟ್ ಸರ್ಚ್ ಇಂಜಿನ್ ಅಡಚಣೆ ಉಂಟಾಗಲಿದ್ದು, ನ್ಯಾಯಾಲದ ಆದೇಶ ಪಾಲನೆ ಕಷ್ಟಸಾಧ್ಯ ಎಂದು ಸಚಿವಾಲಯ ಹೇಳಿಕೆ ನೀಡಿತ್ತು.