'ತಾಲಿಬಾನ್​ ಪಿತಾಮಹ'ನ ಹುಡುಕಿ ಬಂದ ಸಾವು, ತನ್ನದೇ ಮನೆಯಲ್ಲಿ ಚಾಕು ಇರಿತ!

ತಾಲಿಬಾನ್​​ ಎಂಬ ಉಗ್ರ ಸಂಘಟನೆಯನ್ನು ಹುಟ್ಟುಹಾಕಿ ಸಾವಿರಾರು ಅಮಾಯಕರ ಸಾವಿಗೆ ಕಾರಣನಾಗಿದ್ದ ಪಾಕಿಸ್ತಾನ ಮೂಲದ ಉಗ್ರ ಮೌಲಾನಾ ಸಮೀ-ಉಲ್​​ ಹಕ್ ಅಪರಿಚಿತರು ಅವನದೇ ಮನೆಯಲ್ಲಿ ಚಾಕು ಇರಿದು ಕೊಂದು ಹಾಕಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಇಸ್ಲಾಮಾಬಾದ್​: ತಾಲಿಬಾನ್​​ ಎಂಬ ಉಗ್ರ ಸಂಘಟನೆಯನ್ನು ಹುಟ್ಟುಹಾಕಿ ಸಾವಿರಾರು ಅಮಾಯಕರ ಸಾವಿಗೆ ಕಾರಣನಾಗಿದ್ದ ಪಾಕಿಸ್ತಾನ ಮೂಲದ ಉಗ್ರ ಮೌಲಾನಾ ಸಮೀ-ಉಲ್​​ ಹಕ್ ಅಪರಿಚಿತರು ಅವನದೇ ಮನೆಯಲ್ಲಿ ಚಾಕು ಇರಿದು ಕೊಂದು ಹಾಕಿದ್ದಾರೆ.
ತಾಲಿಬಾನ್ ಉಗ್ರ ಸಂಘಟನೆ ಪಿತಾಮಹ ಎಂದೇ ಕರೆಯಲ್ಪಡುತ್ತಿದ್ದ ಪಾಕಿಸ್ತಾನದ ಧಾರ್ಮಿಕ ಗುರು ಹಾಗೂ ಮಾಜಿ ಸೆನೇಟರ್​​ ಮೌಲಾನಾ ಸಮೀ-ಉಲ್​​ ಹಕ್​​ನನ್ನು ಮನೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಸಮೀ ಉಲ್​ ಹಕ್​ ಪುತ್ರ ಹಮೀದ್​​-ಉಲ್​-ಹಕ್​​ ತಂದೆಯ ಕೊಲೆಯ ಬಗ್ಗೆ ದೃಢಪಡಿಸಿದ್ದು, ರಾವಲ್ಪಿಂಡಿಯಲ್ಲಿರುವ ಸಮೀ ಉಲ್​​-ಹಕ್​​ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಪಾಕಿಸ್ತಾನ ಸುದ್ದಿ ಸಂಸ್ಥೆ ಅಲ್ ಜಜೀರಾ ವರದಿ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಸಮೀ ಉಲ್​​-ಹಕ್ ಪುತ್ರ, 'ನನ್ನ ತಂದೆ ರೂಮಿನಲ್ಲಿ ಒಬ್ಬರೇ ಇದ್ದಾಗ ದುಷ್ಕರ್ಮಿಯೊಬ್ಬ ನನ್ನ ತಂದೆ ಮೇಲೆ ಚಾಕುವಿನಿಂದ ದಾಳಿ ಮಾಡಿ, ಪರಾರಿಯಾದ. ಈ ವೇಳೆ ಗಾರ್ಡ್​​ಗಳು ಹೊರಗೆ ಹೋಗಿದ್ದರು. ಅವರು ವಾಪಸ್​ ಬಂದು ನೋಡಿದಾಗ ನನ್ನ ತಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡಿದ್ದಾರೆ ಎಂದು ಹೇಳಿದ್ದಾನೆ. 
81 ವರ್ಷದ ಸಮೀ-ಉಲ್-ಹಕ್​ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಮತ್ತೊಂದು ಉಗ್ರ ಸಂಘಟನೆ 'ಸಿಮಿ'ಯ ವಕ್ತಾರ ಯೂಸಫ್​​​​ ಶಾಹ್​​ ಘಟನೆ ಬಗ್ಗೆ ಹೇಳಿಕೆ ನೀಡಿದ್ದು, ದುಷ್ಕರ್ಮಿ ಯಾರು? ಕೊಲೆಯ ಹಿಂದಿನ ಕಾರಣವೇನು ಅನ್ನೋದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾನೆ.  ಸಮೀ ಉಲ್​​ ಹಕ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿಲ್ಲ. ಇಂದು ಮಧ್ಯಾಹ್ನ ಅಕೋರಾ ಕಟ್ಟಕ್ ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಕೊಲೆ ಸಂಬಂಧ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಯಾರೂ ಈ ಸಮಿ ಉಲ್ ಹಕ್?
ಸಮೀ ಉಲ್​​ ಹಕ್​​​, ಪಾಕಿಸ್ತಾನದಲ್ಲಿ ಪ್ರಖ್ಯಾತ ಧಾರ್ಮಿಕ ಗುರುವಾಗಿದ್ದ. ಈತನಿಗೆ ಸಾಕಷ್ಟು ಮುಸಲ್ಮಾನ ಹಿಂಬಾಲಕರಿದ್ದರು. ಈತನ ಹಕ್ಕಾನಿ ಸೆಮಿನರಿ ಅಫ್ಘಾನಿಸ್ತಾನದ ತಾಲಿಬಾನ್ ಗೆ ಹಾಗೂ ಇತರೆ ಸಾಕಷ್ಟು ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಾದ ಇಸ್ಲಾಂ ಧರ್ಮದ ವ್ಯಾಖ್ಯಾನದ ಬಗ್ಗೆ ಪಾಠ ಮಾಡಿತ್ತು. ಉಗ್ರ ಸಂಘಟನೆ ಹಕ್ಕಾನಿ ನೆಟ್ವರ್ಕ್ ನ ಸಿರಾಜುದ್ದೀನ್​ ಹಕ್ಕಾನಿ ಸೇರಿದಂತೆ ಸಾಕಷ್ಟು ತಾಲಿಬಾನ್​​​​ ಉಗ್ರರು ಇದೇ ಹಕ್​​ ಸೆಮಿನರಿಯಿಂದ ಪದವಿ ಪಡೆದವರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com