ಮಾಸ್ಕೋ: ರಷ್ಯಾದ ಕ್ರಿಮಿಯಾ ಕಾಲೇಜಿನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಯುವಕರು ಸೇರಿ 18 ಮಂದಿ ಸಾವಿಗೀಡಾಗಿದ್ದು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸಿಎನ್ ಎನ್ ವರದಿ ಮಾಡಿದೆ.
ಕ್ರಿಮಿಯನ್ ಟ್ರೇಡ್ ಕಾಲೇಜಿನಲ್ಲಿ ನಡೆದ ಸ್ಪೋಟ ಸಂಭವಿಸಿದೆ. ಶಂಕಿತ ದಾಳಿಕೋರನು ಸಹ ಇದೇ ಕಾಲೇಜು ವಿದ್ಯಾರ್ಥಿಯಾಗಿದ್ದು ಸ್ಥಳೀಯ ಯುವಕನೇ ಆಗಿದ್ದ ಹಾಗೂ ಆತ ಸಹ ಘಟನೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಸ್ಪೋಟಕ್ಕೆ ಅತ್ಯಾಧುನಿಕ ಸ್ಪೋಟಕ ಸಾಮಗ್ರಿಗಳನ್ನು ಬಳಸಲಾಗಿದೆ. ಇದನ್ನು ಭಯೋತೊಆದಕ ದಾಳಿಯೆಂದು ಪರಿಗಣಿಸಿ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಷ್ಯಾದ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಫೆಡರಲ್ ಸೆಕ್ಯೂರಿಟಿ ಸರ್ವೀಸ್ ಮಟ್ಟದ ತನಿಖೆಗೆ ನಿರ್ದೇಶಿಸಿದ್ದಾರೆ.