ಫ್ರಾನ್ಸ್: ಮಕ್ಕಳಿಗೆ ಕೋಕಾ ಕೋಲಾ ಕುಡಿಸಿದ ಅಪ್ಪನಿಗೆ ಜೈಲು ಶಿಕ್ಷೆ!

ತನ್ನ ಮೂರು ಮತ್ತು ನಾಲ್ಕು ವರ್ಷದ ಗಂಡುಮಕ್ಕಳಿಬ್ಬರಿಗೆ ಬರೀ ಕೋಕಾ ಕೋಲಾ ಕುಡಿಸಿದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಿಮೋಜೆಸ್: ತನ್ನ ಮೂರು ಮತ್ತು ನಾಲ್ಕು ವರ್ಷದ ಗಂಡುಮಕ್ಕಳಿಬ್ಬರಿಗೆ ಬರೀ ಕೋಕಾ ಕೋಲಾ ಕುಡಿಸಿದ ತಂದೆಗೆ ಜೈಲು ಶಿಕ್ಷೆ ವಿಧಿಸಿದ ಘಟನೆ ಸೆಂಟ್ರಲ್ ಫ್ರಾನ್ಸ್ ನಲ್ಲಿ ನಡೆದಿದೆ.
ಪರಿಸ್ಥಿತಿಯ ಗಂಭೀರತೆ ಅರಿತುಕೊಳ್ಳದೆ ತಂದೆ ತನ್ನ ಸಂಪಾದನೆಯ ಹಣವನ್ನೆಲ್ಲಾ ಮದ್ಯ ಕುಡಿಯಲು ಮಾಡಿದ್ದಾರೆ ಎಂದು ಫ್ರೆಂಚ್ ವಿಕ್ಟಿಮ್ಸ್ 87 ಸಂಸ್ಥೆಯ ಪ್ರತಿನಿಧಿ ಕಾರೋಲ್ ಪಪೋನ್ ಅವರು ಹೇಳಿದ್ದಾರೆ.
ವೇತನ ಪಡೆದ ಕೆಲವೇ ದಿನಗಳಲ್ಲಿ ಆ ಕುಟುಂಬಕ್ಕೆ ಕುಡಿಯಲು ಕೋಕಾ ಕೋಲಾ ಹೊರತುಪಡಿಸಿ ತಿನ್ನಲು ಬೇರೆ ಏನೂ ಇರಲಿಲ್ಲ ಎಂದು ಪಪೋನ್ ತಿಳಿಸಿದ್ದಾರೆ.
ಈ ವ್ಯಕ್ತಿ ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ಹಲ್ಲೆ ಸಹ ನಡೆಸಿದ್ದ, ಆತನಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮಕ್ಕಳ ವಕೀಲರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com