ಇನ್ನು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಹಿಲರಿ ಕ್ಲಿಂಟನ್, ಹಾಲಿವುಡ್ ನಟ ರಾಬರ್ಟ್ ಡೆ ನಿರೋ ಹಾಗೂ ಹಲವು ಗಣ್ಯರ ವಿಳಾಸಕ್ಕೆ ಶಂಕಿತ ಪೊಟ್ಟಣಗಳನ್ನು ಕಳುಹಿಸಲಾಗಿತ್ತು. ಅಚ್ಚರಿ ವಿಚಾರವೆಂದರೆ ಇವರೆಲ್ಲರೂ ಒಂದಿಲ್ಲೊಂದು ಕಾರಣಗಳಿಂದಾಗಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಟೀಕಿಸಿ ಅಮೆರಿಕ ಸರ್ಕಾರದ ಕೆಂಗಣ್ಣಿಗೆ ತುತ್ತಾಗಿದ್ದರು.