ಕಳೆದ ಕೆಲವು ವರ್ಷಗಳಲ್ಲಿ ಪಾಕಿಸ್ತಾನ ಹಾಗೂ ಚೀನಾ ಸುಮಾರು 6.2 ಬಿಲಿಯನ್ ಡಾಲರ್ ಮೊತ್ತದ 6 ಕ್ಕೂ ಹೆಚ್ಚು ಯೋಜನೆಗಳ ಒಪ್ಪಂದಕ್ಕೆ ಸಹಿ ಹಾಕಿವೆ. ಇದಲ್ಲದೇ ಚೀನಾ ಪಾಕಿಸ್ತಾನಕ್ಕೆ 6.5 ಬಿಲಿಯನ್ ಡಾಲರ್ ಮೊತ್ತದ ವಾಣಿಜ್ಯ ಸಾಲವನ್ನೂ ನೀಡಿದೆ. ಈ ಮಧ್ಯೆ ಅಮೆರಿಕ ಸಹ ಪಾಕಿಸ್ತಾನಕ್ಕೆ ಆರ್ಥಿಕ ನೆರವನ್ನು ಕಡಿತಗೊಳಿಸಿತ್ತು. ಕಳೆದ ವರ್ಷ ಅಕ್ಟೋಬರ್ ನಲ್ಲಿ ಪಾಕಿಸ್ತಾನ ಮತ್ತಷ್ಟು ಆರ್ಥಿಕ ಸಹಕಾರ ಕೋರಿ ಐಎಂಎಫ್ ಗೆ ಮನವಿ ಸಲ್ಲಿಸಿತ್ತು.