ಭಾರತೀಯ ಯೋಧರ ಹಿಂದಿಕ್ಕಲು ಹೋಗಿ ಪಾಕ್ ಸೈನಿಕರು ಮಾಡಿಕೊಂಡ ಎಡವಟ್ಟು, ವಿಡಿಯೋ ವೈರಲ್!

ಒಬ್ಬರನ್ನು ತುಳಿದು ಮೇಲೆ ಬರಬಹುದು ಆದರೆ ಅದು ಹೆಚ್ಚು ದಿನ ಉಳಿಯುವುದಿಲ್ಲ. ಅದೇ ರೀತಿ ಪಾಕ್ ಸೈನಿಕರು ಭಾರತೀಯ ಯೋಧರ ನಿಸ್ವಾರ್ಥ ಸೇವೆಗೆ ಸೆಡ್ಡು ಹೊಡೆಯಲು ಹೋಗಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಇಸ್ಲಾಮಾಬಾದ್: ಒಬ್ಬರನ್ನು ತುಳಿದು ಮೇಲೆ ಬರಬಹುದು ಆದರೆ ಅದು ಹೆಚ್ಚು ದಿನ ಉಳಿಯುವುದಿಲ್ಲ. ಅದೇ ರೀತಿ ಪಾಕ್ ಸೈನಿಕರು ಭಾರತೀಯ ಯೋಧರ ನಿಸ್ವಾರ್ಥ ಸೇವೆಗೆ ಸೆಡ್ಡು ಹೊಡೆಯಲು ಹೋಗಿ ಪೇಚಿಗೆ ಸಿಲುಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಭಾರತೀಯ ಯೋಧರ ನಿಸ್ವಾರ್ಥ ಕೆಲಸಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತವೆ. ಅಲ್ಲದೆ ಭಾರತೀಯ ಯೋಧರ ಕೆಲಸಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಗಳು ವ್ಯಕ್ತವಾಗುತ್ತವೆ. ಹೀಗೆ ತಾವು ಮಿಂಚಬೇಕೆಂಬ ದುರುದ್ದೇಶದಿಂದ ಪಾಕ್ ಸೈನಿಕರ ಮಾಡಿರುವ ವಿಡಿಯೋ ಈಗ ನಗೆಪಾಟಲಿಗೆ ಗುರಿಯಾಗಿದೆ.
ರಸ್ತೆ ಮಧ್ಯೆ ಕೆಟ್ಟು ನಿಂತ ವಾಹನವನ್ನು ಪಾಕ್ ಸೈನಿಕರು ತಳ್ಳುತ್ತಿರುವ ವಿಡಿಯೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ವಿಡಿಯೋ ಅಸಲಿಯತ್ತು ಇದೀಗ ಬಯಲಾಗಿದೆ. ಪಾಕ್ ಸೈನಿಕರು ಚೆನ್ನಾಗಿದ್ದ ಟ್ರಕ್ ಅನ್ನೇ ನಿಲ್ಲಿಸಿ ನಂತರ ತಾವೇ ಟ್ರಕ್ ಅನ್ನು ತಳ್ಳುತ್ತಿರುವಂತೆ ಇದನ್ನು ಮತ್ತೊಂದು ಪಾಕ್ ಸೈನಿಕ ವಿಡಿಯೋ ಮಾಡಿರುವುದನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com