ಪುಲ್ವಾಮಾ ಉಗ್ರ ದಾಳಿ ಖಂಡಿಸಿ ಪಾಕ್ ನೆಲದಲ್ಲೇ ಭಾರತ ಪರ ನಿಂತ ಯುವತಿ ಯಾರು ಗೊತ್ತ?
ಪುಲ್ವಾಮಾದಲ್ಲಿ ನಡೆದ ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದು ಇದರಲ್ಲಿ ನಮ್ಮ ಕೈವಾಡ ಏನು ಇಲ್ಲ ಎಂದು ಪಾಕ್ ಪ್ರಧಾನಿ ಬೊಬ್ಬೆ ಹೊಡೆಯುತ್ತಿದ್ದರೆ.
ಪುಲ್ವಾಮಾದಲ್ಲಿ ನಡೆದ ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದು ಇದರಲ್ಲಿ ನಮ್ಮ ಕೈವಾಡ ಏನು ಇಲ್ಲ ಎಂದು ಪಾಕ್ ಪ್ರಧಾನಿ ಬೊಬ್ಬೆ ಹೊಡೆಯುತ್ತಿದ್ದರೆ ಪಾಕ್ ನೆಲದಲ್ಲೇ ಯುವತಿಯೋರ್ವಳು ಭಾರತ ಪರ ಧ್ವನಿಯೇತ್ತಿದ್ದು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾಳೆ.
ಭಯೋತ್ಪಾದನೆಯನ್ನು ನಿರ್ನಾಮಕ್ಕೆ ಪಣ ತೊಟ್ಟಿರುವ ಭಾರತಕ್ಕೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ಯುವತಿಯರೇ ಫೋಸ್ಟ್ ಮಾಡಿ ನಾನು ಪಾಕಿಸ್ತಾನಿ, ಆದರೆ ನಾನು ಪುಲ್ವಾಮಾ ದಾಳಿಯನ್ನು ಖಂಡಿಸುತ್ತೇನೆ. ಉಗ್ರವಾದ ನಾಶವಾಗಲಿ. ಯುದ್ಧ ಬೇಡ ಎಂದು ಫೋಸ್ಟ್ ಶುರು ಮಾಡಿದ್ದಾರೆ.
ಪುಲ್ವಾಮಾ ದಾಳಿಯನ್ನು ಖಂಡಿಸಿ ಮನುಷ್ಯತ್ವವನ್ನು ಎತ್ತಿ ಹಿಡಿದ ಪಾಕಿಸ್ತಾನಿ ಯುವ ಜನತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಭಾರತ ಮತ್ತು ಪಾಕ್ ಶಾಂತಿ ಹೋರಾಟಗಾರ್ತಿ, ಪತ್ರಕರ್ತೆ ಸೆಹೈರ್ ಮಿರ್ಜಾ ಫ್ಲೇಕಾರ್ಡ್ ಎಂಬುವವರು ಬೋರ್ಡ್ ಹಿಡಿದು ಪೋಸ್ಟ್ ಮಾಡಿದ್ದಾರೆ.
ಸೆಹೈರ್ ಜೊತೆಗೆ ಇನ್ನು ಅನೇಕ ಯುವತಿಯರು ಸಹ ಅದೇ ರೀತಿಯಾಗಿ ಪೋಸ್ಟ್ ಬರೆದು ಫೇಸ್ ಬುಕ್ ನಲ್ಲಿ ಪೋಟೋ ಹಾಕಿದ್ದಾರೆ. ಯುವತಿಯರ ಧೈರ್ಯವನ್ನು ಮೆಚ್ಚಿ ಅಲ್ಲಿನ ಫೇಸ್ ಬುಕ್ ಗ್ರೂಪ್ ಒಂದು ಇದನ್ನು ಶೇರ್ ಮಾಡಿದೆ. ಈ ಕುರಿತು ಆ ಯುವತಿ ಹೇಳಿರುವ ಮಾತುಗಳು ನಿಜಕ್ಕೂ ಹೆಮ್ಮೆ ಪಡುವಂತದ್ದು ಎಂದು ಹೇಳಿದೆ.