"125 ಮಿಲಿಯನ್ ಯುಎಸ್ ಡಾಲರ್ ವೆಚ್ಚದ ಎಫ್ -16 ವಿಮಾನ ಬಳಕೆಯ ಬಗೆಗೆ ನಿರಂತರವಾಗಿ ಬೆಂಬಲಹಾಗೂ ತಾಂತ್ರಿಕ ಭದ್ರತಾ ತಂಡದ ನೆರವನ್ನು ಪಾಕಿಸ್ತಾನಕ್ಕೆ ನೀಡಲು ರಾಜ್ಯ ಇಲಾಖೆ ನಿರ್ಧರಿಸಿದೆ" ಎಂದು ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.ಹೇಳಿಕೆಯ ಪ್ರಕಾರ, ಪಾಕಿಸ್ತಾನ ಅಮೆರಿಖಾವು ಈ ಹಿಂದೆ ನೀಡುತ್ತಿದ್ದ ತಾಂತ್ರಿಕ ಬೆಂಬಲ ಸೇವೆಗಳನ್ನು ಮುಂದುವರಿಸಬೇಕೆಂದು ವಿನಂತಿಸಿದೆ. ಅಮೆರಿಕಾಸರ್ಕಾರ ಮತ್ತು ಗುತ್ತಿಗೆದಾರ ತಾಂತ್ರಿಕ ಮತ್ತು ಲಾಜಿಸ್ಟಿಕ್ಸ್ ಬೆಂಬಲ ಸೇವಾ ಸಂಸ್ಥೆಗಳು ಮತ್ತು ಪಾಕಿಸ್ತಾನ ಪೀಸ್ ಡ್ರೈವ್ ಸುಧಾರಿತ ಯುದ್ಧ ವಿಮಾನಗಳ ಕಾರ್ಯಾಚರಣೆಗಳ ಮೇಲ್ವಿಚಾರಣೆನಡೆಸಲು ತೀರ್ಮಾನಿಸಿದೆ.