ಬೀಚ್‌ನಲ್ಲಿ ಈಜುವಾಗ ಎಚ್ಚರ: ಶಾರ್ಕ್ ದಾಳಿಯಲ್ಲಿ ಯುವತಿಯ ಕಾಲು ಕಟ್, ಭೀಕರ ದೃಶ್ಯ!

ಬೀಚ್‌ಗಳಲ್ಲಿ ಈಜುವಾಗ ಮೈಮರೆಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿ ಈಜುವಾಗ ಶಾರ್ಕ್ ದಾಳಿ ಮಾಡಿದ್ದು ಆಕೆ ತನ್ನ ಕಾಲನ್ನೇ ಕಳೆದುಕೊಳ್ಳಬೇಕಾಯಿತು. ಆಕೆಯ ತಂದೆ ಸಮುದ್ರಕ್ಕೆ ಇಳಿದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಬೀಚ್‌ಗಳಲ್ಲಿ ಈಜುವಾಗ ಮೈಮರೆಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿ ಈಜುವಾಗ ಶಾರ್ಕ್ ದಾಳಿ ಮಾಡಿದ್ದು ಆಕೆ ತನ್ನ ಕಾಲನ್ನೇ ಕಳೆದುಕೊಳ್ಳಬೇಕಾಯಿತು. ಆಕೆಯ ತಂದೆ ಸಮುದ್ರಕ್ಕೆ ಇಳಿದು ಶಾರ್ಕ್ ಜೊತೆ ಸೆಣೆಸದಿದ್ದಿದ್ದರೆ ಯುವತಿಯ ಜೀವವೇ ಹೋಗಿರುತ್ತಿತ್ತು.
ಅಮೆರಿಕದ ಉತ್ತರ ಕ್ಯಾರೋಲಿನಾದಲ್ಲಿರುವ ಪೋರ್ಟ್ ಮೆಕಾನ್ ಸಮುದ್ರದಲ್ಲಿ 17 ವರ್ಷದ ಪೈಗೆ ವಿಂಟರ್ ಈಜುತ್ತಿದ್ದಳು. ಈ ವೇಳೆ ಶಾರ್ಕ್ ಆಕೆಯ ಮೇಲೆ ದಾಳಿ ಮಾಡಿದೆ. ಕೂಡಲೇ ದಡದಲ್ಲಿದ್ದ ಪೈಗೆ ತಂದೆ ಸಮುದ್ರಕ್ಕೆ ಇಳಿದು ಶಾರ್ಕ್ ಮುಖಕ್ಕೆ ಗುದ್ದಿದ್ದಾರೆ. 
ಇದರಿಂದಾಗಿ ಶಾರ್ಕ್ ಪೈಗೆಯನ್ನು ಬಿಟ್ಟು ಹೋಗಿದೆ. ಇನ್ನು ಶಾರ್ಕ್ ದಾಳಿಯಿಂದ ಪೈಗೆ ಎಡಗೈ ಹಾಗೂ ಎಡಗಾಲಿಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಆಕೆಯನ್ನು ಏರ್ ಲಿಫ್ಟ್ ಮೂಲಕ ಆಸ್ಪತ್ರಗೆ ದಾಖಲಿಸಲಾಯಿತು. ಶಸ್ತ್ರ ಚಿಕಿತ್ಸೆ ಮಾಡಿ ಪೈಗೆಯ ಎಡಗಾಲಿನ ಅರ್ಧ ಭಾಗವನ್ನು ಕತ್ತರಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com