ನ್ಯೂಜಿಲೆಂಡ್ ಶೂಟ್ ಔಟ್: ಲಾಯರ್ ಬೇಡ ಎಂದ ಆರೋಪಿ ಹಂತಕ, ಸ್ವಯಂ ವಾದ ಮಂಡಿಸಲು ಸಜ್ಜು!
ಕ್ರೈಸ್ಟ್ ಚರ್ಚ್ ಮಸೀದಿಯಲ್ಲಿ ಐದು ಮಂದಿ ಭಾರತೀಯರೂ ಸೇರಿದಂತೆ ಒಟ್ಟು 50 ಮಂದಿಯ ಮಾರಣ ಹೋಮ ನಡೆಸಿದ್ದ ಹಂತಕ ತನ್ನ ಪರ ವಾದ ಮಾಡಲು ನೇಮಕ ಮಾಡಿದ್ದ ವಕೀಲರನ್ನು ಕಿತ್ತೊಗೆದಿದ್ದು, ತನ್ನ ಪರ ತಾನೇ ವಾದ ಮಂಡಿಸಿಕೊಳ್ಳುವುದಾಗಿ ಹೇಳಿದ್ದಾನೆ.
ವೆಲ್ಲಿಂಗ್ಟನ್: ಕ್ರೈಸ್ಟ್ ಚರ್ಚ್ ಮಸೀದಿಯಲ್ಲಿ ಐದು ಮಂದಿ ಭಾರತೀಯರೂ ಸೇರಿದಂತೆ ಒಟ್ಟು 50 ಮಂದಿಯ ಮಾರಣ ಹೋಮ ನಡೆಸಿದ್ದ ಹಂತಕ ತನ್ನ ಪರ ವಾದ ಮಾಡಲು ನೇಮಕ ಮಾಡಿದ್ದ ವಕೀಲರನ್ನು ಕಿತ್ತೊಗೆದಿದ್ದು, ತನ್ನ ಪರ ತಾನೇ ವಾದ ಮಂಡಿಸಿಕೊಳ್ಳುವುದಾಗಿ ಹೇಳಿದ್ದಾನೆ.
ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿನ ಮಸೀದಿಯೊಂದರ ಮೇಲೆ ದಾಳಿ ನಡೆಸಿದ್ದ ಬಂಧೂಕು ಧಾರಿ ಆಸ್ಟ್ರೇಲಿಯಾ ಮೂಲದ ಬ್ರೆಂಟನ್ ಟ್ಯಾರೆಂಟ್ ತನ್ನ ಪರ ತಾನೇ ವಾದ ಮಂಡಿಸಿಕೊಳ್ಳುತ್ತೇನೆ ಎಂದು ಹೇಳಿದ್ದು, ಆತನ ಪರ ವಾದ ಮಂಡಿಸಲು ಆಸಿಸ್ ಕೋರ್ಟ್ ನೇಮಕ ಮಾಡಿದ್ದ ವಕೀಲರು ಬೇಡ ಎಂದು ಹೇಳಿದ್ದಾನೆ.
ಈ ಬಗ್ಗೆ ಕೋರ್ಟ್ ನ ಡ್ಯೂಟಿ ಲಾಯರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಬ್ರೆಂಟನ್ ಟ್ಯಾರೆಂಟ್ ತನ್ನ ಪರ ತಾನೇ ವಾದ ಮಂಡಿಸಿಕೊಳ್ಳುತ್ತೇನೆ. ತನಗೆ ಯಾವುದೇ ವಕೀಲರ ನೆರವು ಬೇಡ ಎಂದು ಹೇಳಿದ್ದಾನೆ ಎಂದು ಡ್ಯೂಟಿ ಲಾಯರ್ ರಿಚರ್ಡ್ ಪೀಟರ್ಸ್ ಮಾಹಿತಿ ನೀಡಿದ್ದಾರೆ.
ಇನ್ನು ಈ ಪ್ರಕರಣದ ವಿಚಾರಣೆ ಇಂದಿನಿಂದ ಕ್ರೈಸ್ಟ್ ಚರ್ಚ್ ಕೋರ್ಟ್ ನಲ್ಲಿ ನಡೆಯಲಿದೆ.