ಮೊದಲ ಜೆಎಫ್ -17 ಫೈಟರ್ ಜೆಟ್ ಹಸ್ತಾಂತರವೆನ್ನುವುದು ಒಂದು ಪ್ರಮುಖ ಮೈಲಿಗಲ್ಲು, ಎಂಬುದಾಗಿ ಚೀನಾದ ವಾಯು ರಕ್ಷಣಾ ಪರಿಣಿತನಾದ ಫೂ ಕ್ವಿಯಾನ್ಸ್ಹಾವೊ ಹೇಳಿದ್ದಾರೆ. ಈ ಯೋಜನೆಯಡಿಯಲ್ಲಿ ಇದೊಂದು ಮಹತ್ವದ ಘಟ್ಟವಾಗಿದೆ, ಫೈಟರ್ ಜೆಟ್ ನಲ್ಲಿನಪ್ರಾಯೋಗಿಕ ಕಾರ್ಯಾಚರಣೆ ಹಾಗೂ ಅದರಲ್ಲಿ ಕಂಡುಬರುವ ತಾಂತ್ರಿಕ ದೊಷಗಳನ್ನು ಗಮನದಲ್ಲಿರಿಸಿಕೊಂಡು ಭವಿಷ್ಯದಲ್ಲಿ ಇತರ ಜೆಎಫ್-17 ನ ಕೂಲಂಕುಷ ಪರೀಕ್ಷೆಗಳ ಮಾನದಂಡವನ್ನು ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ.