ಬಾಲಿವುಡ್ ನಟ ಹೃತಿಕ್ ರೋಷನ್ ಮೇಲೆ ಕ್ರಷ್: ಅಮೆರಿಕದಲ್ಲಿ ಪತ್ನಿಯನ್ನು ಬಡಿದು ಕೊಂದ ಗಂಡ!

ಬಾಲಿವುಡ್ ನ ಸ್ಟಾರ್ ನಟ ಹೃತಿಕ್ ರೋಷನ್ ಎಂದರೆ ಯಾರಿಗೆ ಇಷ್ಟವಿರಲ್ಲ ಹೇಳಿ. ಹಾಗೆ ಅಮೆರಿಕದಲ್ಲಿ ನೆಲೆಸಿರುವ ಗೃಹಿಣಿಯೋರ್ವಳಿಗೆ ಹೃತಿಕ್ ಮೇಲೆ ಕ್ರಷ್ ಆಗಿತ್ತು. ಇದರಿಂದ ಕುಪಿತಗೊಂಡ ಗಂಡ ಆಕೆಯನ್ನು ಕೊಂದು ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಹೃತಿಕ್ ರೋಷನ್-ದಿನೇಶ್ವರ್-ದಿನೋಜ್
ಹೃತಿಕ್ ರೋಷನ್-ದಿನೇಶ್ವರ್-ದಿನೋಜ್
Updated on: 

ನ್ಯೂಯಾರ್ಕ್: ಬಾಲಿವುಡ್ ನ ಸ್ಟಾರ್ ನಟ ಹೃತಿಕ್ ರೋಷನ್ ಎಂದರೆ ಯಾರಿಗೆ ಇಷ್ಟವಿರಲ್ಲ ಹೇಳಿ. ಹಾಗೆ ಅಮೆರಿಕದಲ್ಲಿ ನೆಲೆಸಿರುವ ಗೃಹಿಣಿಯೋರ್ವಳಿಗೆ ಹೃತಿಕ್ ಮೇಲೆ ಕ್ರಷ್ ಆಗಿತ್ತು. ಇದರಿಂದ ಕುಪಿತಗೊಂಡ ಗಂಡ ಆಕೆಯನ್ನು ಕೊಂದು ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 

ನ್ಯೂಯಾರ್ಕ್ ನಗರದ ಕ್ವೀನ್ಸ್ ಪ್ರಾಂತ್ಯದ ಜೆಮಿನಿ ಅಲ್ಟ್ರಾ ಲಾಂಜ್ ಬಾರ್ ನಲ್ಲಿ ಭಾರತ ಮೂಲದ ಮಹಿಳೆ 27 ವರ್ಷದ ಡೋನೆ ದೊಜೋಯ್ ಕೆಲಸ ಮಾಡುತ್ತಿದ್ದರು. ಅಲ್ಲೆ ನೆಲೆಸಿರುವ ದಿನೇಶ್ವರ ಬುದ್ಧಿದತ್ತ್ ಎಂಬಾತ ಡೋನೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಇದೀಗ ಪತ್ನಿಗೆ ನಟನ ಮೇಲೆ ಕ್ರಷ್ ಆಗಿರುವುದಕ್ಕೆ ಕೋಪಗೊಂಡು ಆಕೆಯನ್ನು ಹತ್ಯೆ ಮಾಡಿದ್ದಾನೆ. 

ಹೃತಿಕ್ ರೋಷನ್ ಅಭಿನಯದ ಕಹೋ ನ ಪ್ಯಾರ್ ಹೈ ಚಿತ್ರವನ್ನು ನೋಡಿದ ಮೇಲೆ ಡೋನೆಗೆ ಹೃತಿಕ್ ಮೇಲೆ ಕ್ರಷ್ ಆಗಿತ್ತು. ಸದಾ ಹೃತಿಕ್ ಬಗ್ಗೆ ಪತ್ನಿ ಮಾತನಾಡುತ್ತಿದ್ದರಿಂದ ಜೊತೆಗೆ ಹೃತಿಕ್ ರೋಷನ್ ಚಿತ್ರಗಳನ್ನು ಅತಿಯಾಗಿ ನೋಡುತ್ತಿದ್ದರಿಂದ ದಿನೇಶ್ವರ್ ಸಹನೆ ಕಳೆದುಕೊಳ್ಳುತ್ತಿದ್ದ. 

ಕೊಲೆಗೂ ಮುನ್ನ ದಿನೇಶ್ವರ್ ಡೋನೆಯನ್ನು ಸಿನಿಮಾಗೆ ಕರೆದೊಯ್ದಿದ್ದ. ನಂತರ ತಮ್ಮ ಅಪಾರ್ಟ್ ಮೆಂಟ್ ಗೆ ಮರಳಿದ ಬಳಿಕ ದಿನೇಶ್ವರ್ ಡೋನೆಯನ್ನು ಹತ್ಯೆ ಮಾಡಿ ನಂತರ ಆತ ಹೊವಾರ್ಡ್ ಬೀಚ್ ನ ಹತ್ತಿರದ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com