ಕೊರೋನಾ: ಪಾಕಿಸ್ತಾನಕ್ಕೇ ತಲೆನೋವಾದ ತಬ್ಲಿಘಿಗಳು!

ಧಾರ್ಮಿಕ ಸಭೆಯನ್ನು ಆಯೋಜಿಸಿ ಲಕ್ಷಾಂತರ ಮಂದಿ ಸೇರಿ, ದೇಶಾದ್ಯಂತ ಕೊರೋನಾ ವೈರಸ್ ಹರಡುತ್ತಿರುವ ತಬ್ಲಿಘಿಗಳ ವಿರುದ್ಧ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿರುವುದು ಭಾರತದಲ್ಲಿ ಅಷ್ಟೇ ಅಲ್ಲ. ಇವರ ಕೃತ್ಯಕ್ಕೆ  ಕಟ್ಟರ್ ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲೇ ಆಕ್ರೋಶ ವ್ಯಕ್ತವಾಗುತ್ತಿದೆ. 
ಪಾಕ್ ಪ್ರಧಾನಿ ಇಮ್ರಾನ್ ಖಾನ್-ತಬ್ಲಿಘಿಗಳು (ಸಂಗ್ರಹ ಚಿತ್ರ)
ಪಾಕ್ ಪ್ರಧಾನಿ ಇಮ್ರಾನ್ ಖಾನ್-ತಬ್ಲಿಘಿಗಳು (ಸಂಗ್ರಹ ಚಿತ್ರ)
Updated on: 

ಲಾಹೋರ್: ಧಾರ್ಮಿಕ ಸಭೆಯನ್ನು ಆಯೋಜಿಸಿ ಲಕ್ಷಾಂತರ ಮಂದಿ ಸೇರಿ, ದೇಶಾದ್ಯಂತ ಕೊರೋನಾ ವೈರಸ್ ಹರಡುತ್ತಿರುವ ತಬ್ಲಿಘಿಗಳ ವಿರುದ್ಧ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿರುವುದು ಭಾರತದಲ್ಲಿ ಅಷ್ಟೇ ಅಲ್ಲ. ಇವರ ಕೃತ್ಯಕ್ಕೆ  ಕಟ್ಟರ್ ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲೇ ಆಕ್ರೋಶ ವ್ಯಕ್ತವಾಗುತ್ತಿದೆ. 

ಕೊರೋನಾ ವೈರಸ್ ಭೀತಿ, ಸರ್ಕಾರದ ಎಚ್ಚರಿಕೆಯನ್ನೂ ಧಿಕ್ಕರಿಸಿ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ತಬ್ಲಿಘಿ ಸಭೆ ನಡೆಸಿದ್ದ ರೀತಿಯಲ್ಲೇ ಪಾಕಿಸ್ತಾನದ ರೈವಿಂಡ್ ಮರ್ಕಜ್ ನಲ್ಲಿ ಕಳೆದ ತಿಂಗಳು ತಬ್ಲಿಘಿಗಳ ಧಾರ್ಮಿಕ ಸಭೆ ನಡೆದಿದೆ. ಅದೂ ಸ್ಥಳೀಯ ಪಂಜಾಬ್ ಸರ್ಕಾರದ ಎಚ್ಚರಿಕೆ ಹಾಗೂ ವಿರೋಧವನ್ನೂ ಧಿಕ್ಕರಿಸಿ ಎಂಬುದು ಗಮನಾರ್ಹ. 

ಅಲ್ಲಿನ ಡಾನ್ ಪತ್ರಿಕೆಯ ವರದಿಯ ಪ್ರಕಾರ,  ಪಂಜಾಬ್ ವಿಶೇಷ ವಿಭಾಗದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಮಾ.10 ರಂದು ನಡೆದ ತಬ್ಲಿಘಿಗಳ ಈ ಸಭೆಯಲ್ಲಿ ಕನಿಷ್ಟ 70,000-80,000 ಜನರು ಭಾಗವಹಿಸಿದ್ದಾರೆ. ಆದರೆ ಜಮಾನ್ ನ ಮ್ಯಾನೇಜ್ಮೆಂಟ್ ನ ಮಾಹಿತಿಯ ಪ್ರಕಾರ ಈ ಸಭೆಯಲ್ಲಿ 2,50,000 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರಂತೆ!

ಈ ಸಭೆಯಲ್ಲಿ ಭಾಗವಹಿಸಿದ್ದ 40 ರಾಷ್ಟ್ರಗಳ ಬಂದಿದ್ದ ಸುಮಾರು 3,000 ಜನರು ಅಂತಾರಾಷ್ಟ್ರೀಯ ವಿಮಾನ ಸೌಲಭ್ಯಗಳಿಲ್ಲದೇ ತಮ್ಮ ದೇಶಕ್ಕೆ ತೆರಳಲಾಗದೇ ಪಾಕಿಸ್ತಾನದಲ್ಲೇ ಉಳಿದಿದ್ದಾರೆ. 

ಸರ್ಕಾರದ ವಿರೋಧಕ್ಕೆ ಕವಡೆಕಾಸಿನ ಕಿಮ್ಮತ್ತು ಇಲ್ಲದೇ ಧಾರ್ಮಿಕ ಸಭೆಗಳನ್ನು ನಡೆಸಿ ಕೊರೋನಾ ಹರಡುತ್ತಿರುವ ತಬ್ಲಿಘಿಗಳು ಈಗ ಪಾಕಿಸ್ತಾನಕ್ಕೂ ತಲೆನೋವಾಗಿ ಪರಿಣಮಿಸಿದ್ದಾರೆ. ಅಲ್ಲಿಯೂ ಇವರ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. 

ಪಾಕಿಸ್ತಾನದಲ್ಲಿ 4196 ಕೊರೋನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 60 ಸಾವುಗಳು ಸಂಭವಿಸಿವೆ. 

ಜಮಾತ್ ನಲ್ಲಿ ಭಾಗಿಯಾಗಿದ್ದ ನೂರಾರು ತಬ್ಲಿಘಿಗಳಿಗೆ ಸೋಂಕು ದೃಢಪಟ್ಟಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 10,263 ಜನರನ್ನು ಪಂಜಾಬ್ ಪ್ರಾಂತ್ಯದ 36 ಜಿಲ್ಲೆಗಳಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗಿದ್ದರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇನ್ನೂ ಸಾವಿರಾರು ಮಂದಿಗಾಗಿ ಶೋಧ ಕಾರ್ಯ ನಡೆದಿದೆ. 

ತಬ್ಲಿಘಿ ಸಭೆಯಲ್ಲಿ ಭಾಗಿಯಾಗಿದ್ದವರ ಪೈಕಿ 539 ಮಂದಿಗೆ ಸೋಂಕು ದೃಢಪಟ್ಟಿದ್ದು, ಅತಿ ಹೆಚ್ಚು ಸಂಖ್ಯೆಗಳು-404, ರೈವಿಂಡ್ ಮರ್ಕಜ್ ನಿಂದ ವರದಿಯಾಗಿವೆ.  ಕೊರೋನಾ ವೈರಸ್ ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿರುವುದಕ್ಕೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರದ ಆರೋಗ್ಯಾಧಿಕಾರಿಗಳು ಸತತ ಮನವಿಗಳ ನಡುವೆಯೂ ಸರ್ಕಾರಕ್ಕೆ ಸಹಕರಿಸದ ತಬ್ಲಿಘಿ ಜಮಾತ್ ನ್ನು ದೂಷಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com