ಮಹಾಮಾರಿ ಕೊರೋನಾಗೆ ವಿಶ್ವದೆಲ್ಲೆಡೆ 90,000 ಮಂದಿ ಬಲಿ

ಮಹಾಮಾರಿ ಕೊರೋನಾ ವೈರಸ್'ಗೆ ವಿಶ್ವದೆಲ್ಲೆಡೆ ಬಲಿಯಾದವರ ಸಂಖ್ಯೆ ಗುರುವಾರ 90,000 ದಾಟಿದೆ. ಇನ್ನೂ ಒಂದೆರಡು ದಿನಗಳಲ್ಲಿ 1 ಲಕ್ಷ ಗಡಿ ದಾಟುವ ಆತಂಕ ಎದುರಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಪ್ಯಾರಿಸ್: ಮಹಾಮಾರಿ ಕೊರೋನಾ ವೈರಸ್'ಗೆ ವಿಶ್ವದೆಲ್ಲೆಡೆ ಬಲಿಯಾದವರ ಸಂಖ್ಯೆ ಗುರುವಾರ 90,000 ದಾಟಿದೆ. ಇನ್ನೂ ಒಂದೆರಡು ದಿನಗಳಲ್ಲಿ 1 ಲಕ್ಷ ಗಡಿ ದಾಟುವ ಆತಂಕ ಎದುರಾಗಿದೆ. 

ಅಮೆರಿಕಾ ಒಂದರಲ್ಲಿಯೇ ನಿನ್ನೆ 1443 ಮಂದಿ ಸಾವಿಗೀಡಾಗಿದ್ದು, ಬುಧವಾರ 1973 ಮಂದಿ ಬಲಿಯಾಗಿದ್ದರು. ಇದರಿಂದಾಗಿ 2 ದಿನಗಳಲ್ಲಿ 3400 ಜನರು ಮೃತಪಟ್ಟಂತಾಗಿದೆ. 

ಬ್ರಿಟನ್ ನಲ್ಲಿ ಕೂಡ 881 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 7978ಕ್ಕೆ ಏರಿಕೆಯಾಗಿದೆ. 

ಇನ್ನು ಪ್ರಾನ್ಸ್ ನಲ್ಲಿ 1,341 ಜನರು ಸಾವಿಗೀಡಾಗಿದ್ದು, ಮೃತರ ಸಂಖ್ಯೆ 12,210ಕ್ಕೇರಿಕೆಯಾಗಿದೆ. ಸ್ಪೇನ್ ನಲ್ಲಿಯೂ 683 ಮಂದಿ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 15238ಕ್ಕೆ ಹೆಚ್ಚಳವಾಗಿದೆ. 

ಈ ಎಲ್ಲಾ ರಾಷ್ಟ್ರಗಳಿಗಿಂತಲೂ ಇಟಲಿ ಮೊದಲನೇ ಸ್ಥಾನದಲ್ಲಿದ್ದು, ಸಾವಿನ ಸಂಖ್ಯೆ 17,669ಕ್ಕೆ ಏರಿಕೆಯಾಗಿದೆ. ಅಲ್ಲದೆ, 139,422 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com