ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿರತೆಯ ಕುರಿತು ಖಚಿತ ಮಾಹಿತಿ ಇಲ್ಲ: ಡೊನಾಲ್ಡ್ ಟ್ರಂಪ್

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿರತೆಯ ಕುರಿತು ನನಗೆ ಯಾವುದೇ ಖಚಿತ ಮಾಹಿತಿಗಳೂ ತಿಳಿದಿಲ್ಲ. ಆದರೆ, ಅವರ ಆರೋಗ್ಯ ಉತ್ತಮವಾಗಿರಲಿ ಎಂದು ಆಶಿಸುತ್ತೇನೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿರತೆಯ ಕುರಿತು ನನಗೆ ಯಾವುದೇ ಖಚಿತ ಮಾಹಿತಿಗಳೂ ತಿಳಿದಿಲ್ಲ. ಆದರೆ, ಅವರ ಆರೋಗ್ಯ ಉತ್ತಮವಾಗಿರಲಿ ಎಂದು ಆಶಿಸುತ್ತೇನೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. 

ಕಿಮ್ ಜಾಂಗ್ ಉನ್'ಗೆ ಚೀನಾದ ವೈದ್ಯರೊಬ್ಬರಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆಂದು ಅಮೆರಿಕಾದ ವರದಿಗಾರರೊಬ್ಬರು ಹೇಳಿದ್ದು, ಇದೀಗ ಈ ಸುದ್ದಿ ಇಂಟರ್ನೆಟ್ ನಲ್ಲಿ ಭಾರೀ ವೈರಲ್ ಆಗುತ್ತಿದೆ. 

ಕಿಮ್ ಜಾಂಗ್ ಉನ್'ಗೆ ಹೃದಯ ನಾಳ ಚಿಕಿತ್ಸೆಗಾಗಿ ಚೀನಾದ ವೈದ್ಯರೊಬ್ಬರು ಉತ್ತರ ಕೊರಿಯಾಗೆ ಆಗಮಿಸಿದ್ದರು. ಅವರಿಂಗ ಕಿಮ್'ಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್, ಉತ್ತರ ಕೊರಿಯಾ ಸರ್ವಾಧಿಕಾರಿ ಆರೋಗ್ಯದ ಬಗ್ಗೆ ನನಗೆ ಯಾವುದೇ ಮಾಹಿತಿಗಳೂ ತಿಳಿದಿಲ್ಲ. ಹೀಗಾಗಿ ಆ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನೂ ನೀಡುವುದಿಲ್ಲ. ಆದರೆ, ಅವರ ಆರೋಗ್ಯ ಉತ್ತಮವಾಗಿರಲಿ ಎಂದು ಆಶಿಸುತ್ತೇನೆಂದು ಹೇಳಿದ್ದಾರೆ. 

 ಕಿಮ್ ಜಾಂಗ್ ಉನ್ ಆರೋಗ್ಯದ ಕುರಿತು ಪ್ರಸ್ತುತ ಪ್ರಕಟಗೊಳ್ಳುತ್ತಿರುವ ವರದಿಗಳು ನಿಜವೋ, ಸುಳ್ಳೋ ಎಂಬುದು ನನಗೆ ತಿಳಿದಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com