ಡೊನಾಲ್ಡ್ ಟ್ರಂಪ್ ಅಮೆರಿಕದ ಸರಿಯಾದ ಅಧ್ಯಕ್ಷರಲ್ಲ- ಮಿಚೆಲ್ ಒಬಾಮಾ

ಡೊನಾಲ್ಡ್ ಟ್ರಂಪ್ ಅಮೆರಿಕಾದ ಸರಿಯಾದ ಅಧ್ಯಕ್ಷರಲ್ಲ ಎಂದು ಹೇಳಿರುವ ಮಿಚೆಲ್ ಒಬಾಮಾ, ಜೊ ಬೀಡನ್ ಅವರಿಗೆ ದೇಶದ ಜನತೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಮಿಚೆಲ್ ಒಬಾಮಾ
ಮಿಚೆಲ್ ಒಬಾಮಾ
Updated on

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕಾದ ಸರಿಯಾದ ಅಧ್ಯಕ್ಷರಲ್ಲ ಎಂದು ಹೇಳಿರುವ ಮಿಚೆಲ್ ಒಬಾಮಾ,ಜೊ ಬೀಡನ್
ಅವರಿಗೆ ದೇಶದ ಜನತೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿನ ಮಕ್ಕಳ ಪರಿಸ್ಥಿತಿ ಸಂಕಷ್ಟದಲ್ಲಿರುವುದಾಗಿ ಅಮೆರಿಕಾದ ಮಾಜಿ ಪ್ರಥಮ ಮಹಿಳೆ ಸಮಾವೇಶವೊಂದರಲ್ಲಿ ಹೇಳಿದರು.

ನವೆಂಬರ್ 3 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್  ಟ್ರಂಪ್ ವಿರುದ್ಧ 77 ವರ್ಷದ ಜೋ ಬಿಡೆನ್ ಸ್ಪರ್ಧಿಸಿದ್ದಾರೆ. ಭಾರತೀಯ ಮೂಲದ ಸೆನೆಟರ್ ಕಮಲ್ ಹ್ಯಾರಿಸ್  ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅಧಿಕಾರವಧಿಯಲ್ಲಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. 2016ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ಮತ ನೀಡಿದವರು ಈ ಬಾರಿ ಜೋ ಬಿಡೆನ್ ಅವರಿಗೆ ಮತ ನೀಡಬೇಕಾಗಿದೆ. ನಮ್ಮ ಜೀವನ ಅವರಂತಹವರ ಮೇಲೆ ಅವಲಂಬಿತವಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com