

ಟೆಹ್ರಾನ್: 2017ರಲ್ಲಿ ದೇಶದ ಆರ್ಥಿಕತೆ ವಿಚಾರ ಸಂಬಂಧ ನಡೆದಿದ್ದ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದ ಪತ್ರಕರ್ತನನ್ನು ಇರಾನ್ ಸರ್ಕಾರ ಗಲ್ಲಿಗೇರಿಸಿದೆ.
ತನ್ನ ಆನ್ ಲೈನ್ ಚಾನಲ್ ಮೂಲಕ ಪತ್ರಕರ್ತ ರುಹೊಲ್ಲಾಹ್ ಝಾಮ್ ಜನರನ್ನು ಪ್ರತಿಭಟನೆ ನಡೆಸುವಂತೆ ಪ್ರಚೋದಿಸಿದ್ದರು ಎಂಬ ಆರೋಪದ ಸಂಬಂಧ ಶಿಕ್ಷೆಗೆ ಗುರಿಯಾಗಿದ್ದರು.
ಪ್ರಚೋಧನೆ ಪ್ರಕರಣ ಸಂಬಂಧ ಕಳೆದ ಜೂನ್ ನಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇದು ಭೂಮಿ ಮೇಲಿನ ಭ್ರಷ್ಟಾಚಾರ ಎಂದು ಉಲ್ಲೇಖಿಸಿ ಝಾಮ್ ಗೆ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಇರಾನ್ ಸರ್ಕಾರ ಶನಿವಾರ ಬೆಳಗ್ಗೆ ಝಾಮ್ ರನ್ನು ಗಲ್ಲಿಗೇರಿಸಿದೆ.
ಝಾಮ್ ತಮ್ಮ ಟೆಲಿಗ್ರಾಂ ಚಾನಲ್ ಮೂಲಕ ಇರಾನ್ ನ ಶಿಯಾ ಪ್ರಜಾಪ್ರಭುತ್ವವನ್ನು ನೇರವಾಗಿ ಪ್ರಶ್ನಿಸಿದ ಅಧಿಕಾರಿಗಳ ಬಗ್ಗೆ ಮುಜುಗರದ ಪ್ರಚಾರ ಮಾಡಿ, ಸರ್ಕಾರ ವಿರುದ್ಧ ಪ್ರತಿಭಟನೆಯ ದಿನಾಂಕವನ್ನು ಪ್ರಕಟಿಸಿದ್ದರು.