ಜೀವಂತ ಗೂಬೆಯ ತಲೆ ಕತ್ತರಿಸಿದ್ದ ಯುವತಿ 6 ತಿಂಗಳಲ್ಲೇ ಘೋರ ಸಾವು, ವಿಡಿಯೋಗೆ ತೀವ್ರ ಟೀಕೆ ಎದುರಾಗಿತ್ತು!

ಜೀವಂತ ಗೂಬೆಯ ತಲೆಯನ್ನು ಕತ್ತರಿಸಿದ್ದ ಯುವತಿಯೋರ್ವಳು ಆರು ತಿಂಗಳಲ್ಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ. 
ಮಿಲೆಡಿಸ್ ಅಲ್ಡಾನಾ
ಮಿಲೆಡಿಸ್ ಅಲ್ಡಾನಾ

ಕೊಲಂಬಿಯಾ: ಜೀವಂತ ಗೂಬೆಯ ತಲೆಯನ್ನು ಕತ್ತರಿಸಿದ್ದ ಯುವತಿಯೋರ್ವಳು ಆರು ತಿಂಗಳಲ್ಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ. 

ಕೊಲಂಬಿಯಾದ ಸುಕ್ರೆ ರಾಜ್ಯದ ಕರೊಜಾಲಾ ಪಟ್ಟಣದ ನಿವಾಸಿ 21 ವರ್ಷದ ಮಿಲೆಡಿಸ್ ಅಲ್ಡಾನಾ ಆರು ತಿಂಗಳ ಹಿಂದೆ ಜೀವಂತ ಗೂಬೆಯ ತಲೆ ಕತ್ತರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಳು. ಈ ವಿಡಿಯೋವನ್ನು ನೋಡಿದ ಪ್ರಾಣಿಪ್ರಿಯರು ಆಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ಆದರೆ ಇದೀಗ ಅಲ್ಡಾನಾಳನ್ನು ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಲ್ಡಾನಾಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಆಕೆ ಸಾವನ್ನಪ್ಪಿದ್ದಳು. 

ಜೀವಂತ ಗೂಬೆಯನ್ನು ಕೊಂದ ಆರೋಪದ ಸಂಬಂಧ ಅಲ್ಡಾನಾ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಳು. ಕೊಲಂಬಿಯಾ ಪರಿಸರ ಸಂಸ್ಥೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೂರು ದಾಖಲಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com