ವಿದೇಶ

ಒಪ್ಪಂದ ಮುರಿದ ಅಫ್ಘಾನ್ ಅಧ್ಯಕ್ಷ: ತಾಲಿಬಾನಿಗಳ ಬಿಡುಗಡೆಗೆ ಒಲ್ಲೆ ಎಂದ ಅಶ್ರಫ್ ಘನಿ?

ಒಪ್ಪಂದ ಮುರಿದ ಅಫ್ಘಾನ್ ಅಧ್ಯಕ್ಷ: ತಾಲಿಬಾನಿಗಳ ಬಿಡುಗಡೆಗೆ ಒಲ್ಲೆ ಎಂದ ಅಶ್ರಫ್ ಘನಿ?
ಅಶ್ರಫ್ ಘನಿ
Published On :

ಕಾಬುಲ್: ಅಮೆರಿಕಾ-ತಾಲಿಬಾನ್ ನಡುವೆ ನಡೆದಿದ್ದ ಶಾಂತಿ ಒಪ್ಪಂದ ಮುರಿದು ಬಿದ್ದಿದ್ದು, ಒಪ್ಪಂದವಾದ ಮರುದಿನವೇ ಅಫ್ಘಾನಿಸ್ತಾನದ ಅಧ್ಯಕ್ಷ ಜೈಲಿನಲ್ಲಿ ಇರಿಸಲಾಗಿರುವ ತಾಲಿಬಾನ್ ಬಂಡುಕೋರರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. 

ಒಪ್ಪಂದದಲ್ಲಿ ಅಡಕವಾಗಿರುವ ಪ್ರಮುಖ ಅಂಶದಂತೆ, ಅಫ್ಘಾನಿಸ್ತಾನ ಸರ್ಕಾರದ ಬಂಧನದಲ್ಲಿರುವ 5,000 ತಾಲಿಬಾನ್ ಬಂಡುಕೋರರನ್ನು ಬಿಡುಗಡೆ ಮಾಡಬೇಕಿತ್ತು. ಆದರೆ, ಇದಕ್ಕೆ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಪ್ ಘನಿ ನಿರಾಕರಿಸಿದ್ದಾರೆ. 

ಬಂಡುಕೋರರ ಬಿಡುಗಡೆಗೆ ಬದ್ಧವಾಗಿಲ್ಲ. ಶಾಂತಿ ಶಾಶ್ವತವಾಗಿ ಬೇರೂರುವ ವರೆಗೂ ಯಾವುದೇ ಬಂಡುಕೋರರ ಬಿಡುಗಡೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಶ್ರಫ್ ಘನಿಯವರು ಈ ಹೇಳಿಕೆ ಇದೀಗ ತಾಲಿಬಾನಿಗಳನ್ನು ಮತ್ತೆ ಕೆರಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದರ ಪರಿಣಾಮ ಮತ್ತಷ್ಟು ಸಂಘರ್ಷ ಹಾಗೂ ರಕ್ತಪಾತಕ್ಕೆ ನಾಂದಿ ಹಾಡಲಿದಯೇ ಎಂಬುದನ್ನು ಕಾದು ನೋಡಬೇಕಿದೆ. 

ಈ ನಡುವೆ ಉಭಯ ರಾಷ್ಟ್ರಗಳೊಂದಿಗೆ ಶಾಂತಿ ಒಪ್ಪಂದವಾದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ತಾಲಿಬಾನ್ ನಾಯಕರನ್ನು ಶೀಘ್ರದಲ್ಲಿ ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. 

ಒಪ್ಪಂದದ ಆಶಯದಂತೆ, ತಾಲಿಬಾನ್ ನಾಯಕರು ಉಗ್ರರನ್ನು ದ್ವಂಸಗೊಳಿಸುವ ಭರವಸೆಯಿದೆ ಎಂದು ತಿಳಿಸಿದ್ದರು. 

ಅಮೆರಿಕಾ-ತಾಲಿಬಾನ್ ಶಾಂತಿ ಒಪ್ಪಂದ ಆಶ್ಚರ್ಯ ತರಿಸಿಲ್ಲ, ಕಾದು ನೋಡಿ ಮುಂದೇನಾಗುತ್ತದೆ: ಎಸ್.ಜೈಶಂಕರ್

ಅಮೆರಿಕಾ-ತಾಲಿಬಾನ್ ಶಾಂತಿ ಒಪ್ಪಂದ ಭಾರತಕ್ಕೆ ಆಶ್ಚರ್ಯವೇನೂ ತಂದಿಲ್ಲ. ಕಾದು ನೋಡಿ ಮಂದೇನಾಗುತ್ತದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಹೇಳಿದ್ದಾರೆ. 

ನೀತಿ ಸಂಶೋಧನಾ ಕೇಂದ್ರದಲ್ಲಿ ಆಯೋಜನೆಗೊಳಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ದೋಹಾದಲ್ಲಿ ಅಮೆರಿಕಾ ಹಾಗೂ ತಾಲಿಬಾನ್ ನಡುವೆ ಶಾಂತಿ ಒಪ್ಪಂದ ನಡೆದಿರುವುದು ನಮಗೆ ಆಶ್ಚರ್ಯವೇನು ತರಿಸಿಲ್ಲ. ಮುಂದೆ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಂದು ಒಂದು ರೀತಿ ಪಕೀಜಾ ಚಿತ್ರವನ್ನು ನೋಡಿದ ರೀತಿಯಾಗುತ್ತದೆ. ಮುಂದೆ ಏನಾಗುತ್ತದೆ? ಏನೆಲ್ಲಾ ಬದಲಾವಣೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ. 

ಕಳೆದ 20 ವರ್ಷಗಳಲ್ಲಿ ಯುದ್ಧ ಪೀಡಿತ ಆಫ್ಘಾನಿಸ್ತಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತನ್ನ ಸಾಧನೆಗಳು ಕಳೆಗುಂದಲು ಅವಕಾಶ ನೀಡಬಾರದು. 2001ರಲ್ಲಿ ಇದ್ದ ಆಫ್ಘಾನಿಸ್ತಾನ ಈಗಿಲ್ಲ. ತನ್ನ ಸಾಧನೆಯನ್ನು ಕಳೆದುಕೊಳ್ಳಬಾರದು ಎಂಬ ಸಂದೇಶವನ್ನು ಅಮೆರಿಕಾಗೆ ನೀಡಲು ಭಾರತ ಬಯಸುತ್ತದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.