ಕೊವಿದ್‍-19 ವಿರುದ್ಧದ ಹೋರಾಟಕ್ಕೆ 8.3 ಶತಕೋಟಿ ಡಾಲರ್ ತುರ್ತು ನಿಧಿ ಪ್ಯಾಕೇಜ್‌ಗೆ ಟ್ರಂಪ್ ಸಹಿ

ಕೊವಿದ್‍-19(ಕೊರೊನ ವೈರಸ್) ಹರಡುವುದನ್ನು ತಡೆಯಲು ಮತ್ತು ಸೋಂಕಿನ ಚಿಕಿತ್ಸೆಗಳಿಗಾಗಿ ಅಮೆರಿಕ ಸಂಸತ್ ಈ ವಾರ ಅಂಗೀಕರಿಸಿದ 8.3 ಶತಕೋಟಿ ಡಾಲರ್ ಗಳ ತುರ್ತು ನಿಧಿ ಪ್ಯಾಕೇಜ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ.
ಟ್ರಂಪ್
ಟ್ರಂಪ್

ವಾಷಿಂಗ್ಟನ್: ಕೊವಿದ್‍-19(ಕೊರೊನ ವೈರಸ್) ಹರಡುವುದನ್ನು ತಡೆಯಲು ಮತ್ತು ಸೋಂಕಿನ ಚಿಕಿತ್ಸೆಗಳಿಗಾಗಿ ಅಮೆರಿಕ ಸಂಸತ್ ಈ ವಾರ ಅಂಗೀಕರಿಸಿದ 8.3 ಶತಕೋಟಿ ಡಾಲರ್ ಗಳ ತುರ್ತು ನಿಧಿ ಪ್ಯಾಕೇಜ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ.

ಕೊವಿದ್-19 ಸೋಂಕು ನಿಯಂತ್ರಣ ಮತ್ತು ತಡೆಗೆ ಸರ್ಕಾರದಿಂದ ತುರ್ತು ಬೆಂಬಲ ಅಗತ್ಯವಿರುವುದರಿಂದ ಪ್ಯಾಕೇಜ್ ಬಿಡುಗಡೆ ಮಾಡಲಾಗುತ್ತಿದೆ. ಅಮೆರಿಕ ಸಂಸತ್ ಗುರುವಾರ ನಿಧಿ ಪ್ಯಾಕೇಜ್ ಬಿಡುಗಡೆಗೆ ಸರ್ವಾನುಮತದಿಂದ ಅಂಗೀಕರಿಸಿತ್ತು.

ಅಮೆರಿಕಾ ಸಂಸತ್ ನಿಂದ ಸರ್ವಾನುಮತದಿಂದ ಅಂಗೀಕಾರಗೊಂಡಿದ್ದ ಈ ಪ್ಯಾಕೇಜ್'ಗೆ ಇದೀಗ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com