

ಅಬು ದಾಬಿ: ದೇಶದಲ್ಲಿ ವಲಸಿಗರ ಮರು ನೋಂದಣಿ ಅಭಿಯಾನವನ್ನು ಆರಂಭಿಸಿದ ಬಳಿಕ ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ತಾಯ್ನಾಡಿಗೆ ಮರಳಲು ಯುಎಇಯಿಂದ ಸುಮಾರು 32 ಸಾವಿರಕ್ಕೂ ಹೆಚ್ಚು ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಗುರುವಾರ ಸಂಜೆ 5 ಗಂಟೆ ವೇಳೆಗೆ ಸುಮಾರು 32 ಸಾವಿರಕ್ಕೂ ಹೆಚ್ಚಿನ ನೋಂದಣಿಯನ್ನು ಸ್ವೀಕರಿಸಲಾಗಿದೆ ಎಂದು ದುಬೈನಲ್ಲಿರುವ ಭಾರತೀಯ ರಾಯಬಾರಿ ವಿಫುಲ್ ಗಲ್ಫ್ ನ್ಯೂಸ್ ಗೆ ತಿಳಿಸಿದ್ದಾರೆ.
ಹೆಸರು ನೋಂದಣಿಯನ್ನು ಸ್ವೀಕರಿಸುವುದಾಗಿ ಬುಧವಾರ ರಾತ್ರಿ ದುಬೈನಲ್ಲಿರುವ ಭಾರತೀಯ ರಾಯಬಾರಿ ಅಧಿಕಾರಿಗಳು ಘೋಷಣೆ ಮಾಡಿದ್ದರು. ಹೆಸರು ನೋಂದಣಿ ಪ್ರಕ್ರಿಯೆ ಘೋಷಣೆ ಹೊರಬಿದ್ದ ನಿಮಿಷದೊಳಗೆ ತಾಂತ್ರಿಕ ದೋಷದಿಂದಾಗಿ ವೆಬ್ ಸೈಟ್ ನಲ್ಲಿನ ಟ್ವೀಟ್ ಡಿಲಿಟ್ ಆಗಿದೆ. ನಂತರ ಗುರುವಾರ ಬೆಳಗ್ಗೆ ಅದನ್ನು ಮರು ಪೋಸ್ಟ್ ಮಾಡಲಾಗಿದೆ.
ಆದಾಗ್ಯೂ, ವಿಮಾನದಲ್ಲಿನ ಆಸನದ ಖಾತ್ರಿ ನೀಡದ ಕಾನ್ಸುಲ್ ಜನರಲ್, ಅತ್ಯಂತ ಅರ್ಹ ಜನರಿಗೆ ಮಾತ್ರ ವ್ಯವಸ್ಥೆ ಮಾಡಲಾಗುವುದು, ಭಾರತ ಸರ್ಕಾರ ಸೇವೆಗಳನ್ನು ಪುನರ್ ಆರಂಭಿಸಿದಾಗ ದುಬೈ ವಿಮಾನ ನಿಲ್ದಾಣದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಗರ್ಭೀಣಿಯರು, ತುರ್ತು ವೈದ್ಯಕೀಯ ಸೌಲಭ್ಯ ಬೇಕಾಗಿರುವವರು, ವಯೋವೃದ್ಧರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ