ಭಾರತಕ್ಕೆ ಪ್ರತಿಸ್ಪರ್ಧಿಯೇ ಇಲ್ಲ, ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಮತ್ತೆ ಭಾರತ!

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಐದು ತಾತ್ಕಾಲಿಕ ಸದಸ್ಯತ್ವಕ್ಕಾಗಿ ಜೂನ್ 17 ರಂದು ಚುನಾವಣೆ ನಡೆಸಲು ವಿಶ್ವಸಂಸ್ಥೆ ನಿರ್ಧರಿಸಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಐದು ತಾತ್ಕಾಲಿಕ ಸದಸ್ಯತ್ವಕ್ಕಾಗಿ ಜೂನ್ 17 ರಂದು ಚುನಾವಣೆ ನಡೆಸಲು ವಿಶ್ವಸಂಸ್ಥೆ ನಿರ್ಧರಿಸಿದೆ. 

ಏಷ್ಯಾ ಪೆಸಿಫಿಕ್ ವಲಯದ ಸ್ಥಾನಕ್ಕೆ ಭಾರತ ಏಕಮಾತ್ರ ಸ್ಪರ್ಧಿಯಾಗಿರುವುದರಿಂದ ಚುನಾವಣೆ ಕೇವಲ ಔಪಚಾರಿಕ ಪ್ರಕ್ರಿಯೆ ಎಂಬಂತೆ ಕಾಣಿಸುತ್ತಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಚುನಾವಣೆಗೆ ವಿಶ್ವಸಂಸ್ಥೆ ವಿಶೇಷ ವ್ಯವಸ್ಥೆ ಮಾಡುತ್ತಿದೆ. ಈ ಸಂಬಂಧ 193 ಸದಸ್ಯ ದೇಶಗಳ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆಯ ಕುರಿತು ವಿಶೇಷ ನಿರ್ಣಯ ಅಂಗೀಕರಿಸಿದೆ. 

2021-22ರ ಅವಧಿಗೆ ಏಷ್ಯಾ ಪೆಸಿಫಿಕ್ ಸ್ಥಾನಕ್ಕೆ ಭಾರತದ ನಾಮ ನಿರ್ದೇಶನವನ್ನು, ಕಳೆದ ವರ್ಷ ಜೂನ್ ನಲ್ಲಿ ಚೀನಾ, ಪಾಕಿಸ್ತಾನ ಸೇರಿ  55 ದೇಶಗಳು ಬೆಂಬಲಿಸಿದ್ದವು. ಭಾರತ ಕೊನೆಯ ಬಾರಿಗೆ 2011-12ರಲ್ಲಿ ಭದ್ರತಾ ಮಂಡಳಿ ತಾತ್ಕಾಲಿಕ ಸದಸ್ಯ ದೇಶವಾಗಿ ಸೇವೆ ಸಲ್ಲಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com