

ಸ್ಯಾನ್ ಫ್ರಾನ್ಸಿಸ್ಕೋ: ಅಮೆಝಾನ್‌ನ 20 ಸಾವಿರಷ್ಟು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಮಾರ್ಚ್‌ನಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಾಗಿನಿಂದ ಅಮೆಝಾನ್‌ನ 19,800 ಸಿಬ್ಬಂದಿಗೆ ವೈರಸ್ ದೃಢಪಟ್ಟಿದೆ.
ಅಮೆರಿಕದ ಫುಡ್ ಮಾರ್ಕೆಟ್ ಗ್ರಾಸರಿ ಸೇರಿ 1.37 ಮಿಲಿಯನ್ ಫ್ರಂಟ್‌ಲೈನ್ ಕೆಲಸಗಾರರಲ್ಲಿ ಕೊರೋನಾ ವೈರಸ್ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಕಂಡುಬಂದಿದೆ. ತಮ್ಮ ಬಗ್ಗೆ ಕಂಪನಿ ಕಾಳಜಿ ವಹಿಸುತ್ತಿಲ್ಲ , ಯಾವುದೇ ಮಾಹಿತಿ ಹಂಚಿಕೊಳ್ಳುತ್ತಿಲ್ಲ ಎಂದು ಅಮೆಝಾನ್ ಕೆಲಸಗಾರರು ಆರೋಪಿಸಿದ ಬೆನ್ನಲ್ಲೇ ಕಂಪನಿ ಸೋಂಕಿತರ ಮಾಹಿತಿ ಬಹಿರಂಗಪಡಿಸಿದೆ.
ಪ್ರತಿದಿನ 650 ಸೈಟ್‌ಗಳಲ್ಲಿ 50 ಸಾವಿರ ಜನರ ಕೊರೋನಾ ಪರೀಕ್ಷೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಕೊರೋನಾ ಪ್ರಾರಂಭವಾದಾಗಿನಿಂದ ಕಂಪನಿ ಸಿಬ್ಬಂದಿಗೆ ಮಾಹಿತಿ ನೀಡುತ್ತಲೇ ಇದೆ.