ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಬದಲಾವಣೆಗೆ ಆಗ್ರಹಿಸಿ ಭಾರತ ಸೇರಿದಂತೆ ಜಿ-4 ರಾಷ್ಟ್ರಗಳ ಪತ್ರ!

ಜಾಗತಿಕವಾಗಿ ಪ್ರಾಬಲ್ಯ ಮೆರೆಯಲು ಇನ್ನಿಲ್ಲದ ಪ್ರಯತ್ನ ಮಾಡತ್ತಿರುವ ಚೀನಾವನ್ನು ನಿಯಂತ್ರಿಸುವ ಭಾರತ ಸೇರಿದಂತೆ ಜಿ-4 ರಾಷ್ಟ್ರಗಳ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದು, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಬದಲಾವಣೆಗೆ ಆಗ್ರಹಿಸಿವೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ
ವಿಶ್ವಸಂಸ್ಥೆ ಭದ್ರತಾ ಮಂಡಳಿ
Updated on: 

ನವದೆಹಲಿ: ಜಾಗತಿಕವಾಗಿ ಪ್ರಾಬಲ್ಯ ಮೆರೆಯಲು ಇನ್ನಿಲ್ಲದ ಪ್ರಯತ್ನ ಮಾಡತ್ತಿರುವ ಚೀನಾವನ್ನು ನಿಯಂತ್ರಿಸುವ ಭಾರತ ಸೇರಿದಂತೆ ಜಿ-4 ರಾಷ್ಟ್ರಗಳ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದು, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಬದಲಾವಣೆಗೆ ಆಗ್ರಹಿಸಿವೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವ್ಯಾಪಕ ಬದಲಾವಣೆ ಬಯಸಿರುವ ಜಿ-4 ರಾಷ್ಟ್ರಗಳು ಒಗ್ಗಟ್ಟನ್ನು ಪ್ರದರ್ಶಿಸಿದ್ದು, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ರಾಷ್ಟ್ರವಾಗಿರುವ ಚೀನಾವನ್ನು ತೀವ್ರವಾಗಿ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ  ಸದಸ್ಯ ರಾಷ್ಟ್ರಗಳ ಸಂಖ್ಯೆ ಏರಿಕೆಯಾಗಬೇಕು ಎಂದು ಜಿ-4 ರಾಷ್ಟ್ರಗಳು ಆಗ್ರಹಿಸಿವೆ. ಆ ಮೂಲಕ ಭಾರತ, ಜರ್ಮನಿ, ಜಪಾನ್ ಹಾಗೂ ಬ್ರೆಜಿಲ್ ರಾಷ್ಟ್ರಗಳಿಗೂ ಕೂಡ ಇದರಲ್ಲಿ ಸ್ಥಾನ ದೊರಕಬೇಕು ಎಂದು ಒತ್ತಾಯಪಡಿಸಿವೆ ಎನ್ನಲಾಗಿದೆ.

ಜಿ-4 ರಾಷ್ಟ್ರಗಳ ಪರವಾಗಿ ಬರೆದ ಪತ್ರವನ್ನು ಭಾರತದ ಖಾಯಂ ಪ್ರತಿನಿಧಿ ನಾಗರಾಜ್ ನಾಯ್ಡು ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಿಗೆ ಸಲ್ಲಿಕೆ ಮಾಡಿದ್ದಾರೆ. ಪತ್ರದಲ್ಲಿ ಚೀನಾ ದೇಶದ ಹೆಸರನ್ನು ಹೇಳದೆ ಅದರ ಮೇಲೆ ನೇರವಾಗಿ ದಾಳಿ ಮಾಡಲಾಗಿದೆ.

ಈ ಬಗ್ಗೆ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಗೆ ಪತ್ರ ಬರೆದ ಜಿ-4 ರಾಷ್ಟ್ರಗಳು ಬರೆದಿರುವ ಪತ್ರದಲ್ಲಿ, 'ಒಂದು ದಶಕದಿಂದ ಯುಎನ್ಎಸ್ಸಿಯನ್ನು ಬದಲಾಯಿಸುವ ಪ್ರಯತ್ನಗಳು ಕಾಗದದ ಮೇಲಿವೆ, ಆದರೆ ಇದಕ್ಕೆ ವಿರುದ್ಧವಾಗಿರುವ ಕೆಲವು ದೇಶಗಳು ಈ ಬದಲಾವಣೆಗಳನ್ನು  ನೋಡಲು ಬಯಸುವುದಿಲ್ಲ'.ಅಂತರ್-ಸರ್ಕಾರಿ ಮಾತುಕತೆಗಳು -ಐಜಿಎನ್ ಹೆಚ್ಚು ಕಾಲ ಮಾತುಕತೆಯನ್ನು ಒತ್ತೆಯಾಗಿಟ್ಟುಕೊಳ್ಳಬಾರದು. UNSC ಯಲ್ಲಿ ಬದಲಾವಣೆ ತರಲು ನಾವು ಐಜಿಎನ್‌ನಿಂದ ವಿಭಿನ್ನ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದಿವೆ. ಪ್ರಮುಖವಾಗಿ ಭಾರತದೊಂದಿಗೆ ಜರ್ಮನಿ  ಮತ್ತು ಜಪಾನ್ ಅನ್ನು ಭದ್ರತಾ ಮಂಡಳಿಯ ಖಾಯಂ ಸದಸ್ಯರನ್ನಾಗಿ ಮಾಡಲು ಚೀನಾ ವಿರೋಧಿಸುತ್ತದೆ. ಇದೆ ಕಾರಣದಿಂದ ಯುಎನ್‌ಎಸ್‌ಸಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ವಿಷಯದಲ್ಲಿ ಅದು ಯಾವಾಗಲೂ ಸಹಕಾರ ನೀಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com