ತೀವ್ರಗಾಮಿ ಇಸ್ಲಾಮಿಕ್ ಪಕ್ಷದ ಎದುರು ಮಂಡಿಯೂರಿದ ಪಾಕ್ ಸರ್ಕಾರ!

ತೀವ್ರಗಾಮಿ ಇಸ್ಲಾಮಿಕ್ ಪಕ್ಷವೊಂದರ ಎದುರು ಪಾಕಿಸ್ತಾನದ ಸರ್ಕಾರ ಮಂಡಿಯೂರಿದ್ದು, ಅದರ ಮಹತ್ವದ ಬೇಡಿಕೆಗೆ ಒಪ್ಪಿಗೆ ಸೂಚಿಸಿದೆ. 
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ತೀವ್ರಗಾಮಿ ಇಸ್ಲಾಮಿಕ್ ಪಕ್ಷವೊಂದರ ಎದುರು ಪಾಕಿಸ್ತಾನದ ಸರ್ಕಾರ ಮಂಡಿಯೂರಿದ್ದು, ಅದರ ಮಹತ್ವದ ಬೇಡಿಕೆಗೆ ಒಪ್ಪಿಗೆ ಸೂಚಿಸಿದೆ. 

ಫ್ರಾನ್ಸ್ ನಲ್ಲಿ ಪ್ರವಾದಿ ಮೊಹಮ್ಮದ್ ರ  ಬಗ್ಗೆ ವ್ಯಂಗ್ಯ ಚಿತ್ರ ಬರೆದಿದ್ದನ್ನು ವಿರೋಧಿಸಿ ತೆಹ್ರೀಕ್-ಎ- ಲಬ್ಬೈಕ್  ಪಾಕಿಸ್ತಾನ್ (ಟಿಎಲ್ ಪಿ) ಎಂಬ ಪಕ್ಷ ಪಾಕಿಸ್ತಾನದಲ್ಲಿರುವ ಫ್ರಾನ್ಸ್ ನ ರಾಯಭಾರಿಯನ್ನು ಉಚ್ಚಾಟಿಸಬೇಕು ಹಾಗೂ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನೂ ರದ್ದುಗೊಳಿಸಬೇಕೆಂದು ಆಗ್ರಹಿಸಿತ್ತು. ಸರಣಿ ಮಾತುಕತೆಯ ಬಳಿಕ ಪಾಕಿಸ್ತಾನ ಸರ್ಕಾರ ತೀವ್ರಗಾಮಿ ಪಕ್ಷವೊಂದರ ಬೇಡಿಕೆಗಳಿಗೆ ತಲೆಬಾಗಿದ್ದು, ಫ್ರೆಂಚ್ ರಾಯಭಾರಿಯನ್ನು ವಾಪಸ್ ಕಳಿಸುವ ನಿರ್ಣಯವನ್ನು ಸಂಸತ್ ನಲ್ಲಿ ಪಾಕ್ ಸರ್ಕಾರ ಘೋಷಿಸಿದೆ. 

"ಟಿಎಲ್ ಪಿ ಜೊತೆಗೆ ಹಲವು ಸುತ್ತಿನ ಮಾತುಕತೆ ಬಳಿಕ ಫ್ರಂಚ್ ರಾಯಭಾರಿಯನ್ನು ವಾಪಸ್ ಕಳಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ನಿರ್ಣಯವನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಂಡಿಸಲಾಗುತ್ತದೆ" ಎಂದು ಆಂತರಿಕ ಸಚಿವ ಶೇಖ್ ರಶೀದ್ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಟಿಎಲ್ ಪಿ ಕಾರ್ಯಕರ್ತರ ವಿರುದ್ಧ ಭಯೋತ್ಪಾದನೆ ಆರೋಪದ ಅಡಿಯಲ್ಲಿ ದಾಖಲಿಸಲಾಗಿರುವ ಪ್ರಕರಣಗಳನ್ನೂ ವಾಪಸ್ ಪಡೆಯಲು ಪಾಕಿಸ್ತಾನ ಸರ್ಕಾರ ತೀರ್ಮಾನಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com