'ಇಸ್ಲಾಮಿಕ್ ಎಮಿರೇಟ್ ಆಫ್ ಆಫ್ಘಾನಿಸ್ತಾನ್': ಆಫ್ಘಾನಿಸ್ತಾನದ ಸ್ವಾತಂತ್ರ್ಯ ದಿನ ಆಚರಿಸಿದ ತಾಲಿಬಾನ್ ಎದುರು ಇದೆ ಬೆಟ್ಟದಷ್ಟು ಸವಾಲು!

ಆಫ್ಘಾನಿಸ್ತಾನ ದೇಶವನ್ನು ತನ್ನ ಸುಪರ್ದಿಗೆ ವಶಪಡಿಸಿಕೊಂಡ ನಂತರ ತಾಲಿಬಾನ್‌ಗಳು ಗುರುವಾರ ಅಫ್ಘಾನಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಾರೆ.
ಕಾಬುಲ್ ನಗರದಲ್ಲಿ ಗನ್ ಹಿಡಿದು ಕಾವಲು ಕಾಯುತ್ತಿರುವ ತಾಲಿಬಾನಿಯರು
ಕಾಬುಲ್ ನಗರದಲ್ಲಿ ಗನ್ ಹಿಡಿದು ಕಾವಲು ಕಾಯುತ್ತಿರುವ ತಾಲಿಬಾನಿಯರು
Updated on: 

ಕಾಬುಲ್: ಆಫ್ಘಾನಿಸ್ತಾನ ದೇಶವನ್ನು ತನ್ನ ಸುಪರ್ದಿಗೆ ವಶಪಡಿಸಿಕೊಂಡ ನಂತರ ತಾಲಿಬಾನ್‌ಗಳು ಗುರುವಾರ ಅಫ್ಘಾನಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಾರೆ. ತಾವು ಅಮೆರಿಕ ಸರ್ಕಾರವನ್ನು ಸೋಲಿಸಿದ್ದೇವೆ ಎಂದು ಹೇಳಿಕೊಂಡಿರುವ ತಾಲಿಬಾನೀಯರ ಮುಂದೆ ಆಫ್ಘನ್ ನ ಹೆಪ್ಪುಗಟ್ಟಿದ ಸರ್ಕಾರವನ್ನು ನಡೆಸುವುದರಿಂದ ಹಿಡಿದು ದೇಶದ ನಾಗರಿಕರ ಮತ್ತು ವಿಶ್ವದ ರಾಷ್ಟ್ರಗಳ ವಿರೋಧವನ್ನು ಸಮರ್ಥವಾಗಿ ಎದುರಿಸಿ ಸಮರ್ಥ ಆಡಳಿತ ನಡೆಸುವ ಸವಾಲು ಬೃಹತ್ತಾಗಿದೆ.

ಎಟಿಎಂಗಳಲ್ಲಿ ಹಣದ ಕೊರತೆಯಿಂದ ಹಿಡಿದು ಆಮದುಗಳ ಮೇಲೆ ಅವಲಂಬಿತವಾಗಿರುವ 38 ಮಿಲಿಯನ್ ಜನರಿಗೆ ಆಹಾರ ಒದಗಿಸುವುದು, ನಾಗರಿಕ ಸರ್ಕಾರದ ವಿರೋಧ, ಸವಾಲುಗಳನ್ನು ಎದುರಿಸಿ ನಿಂತು ಆಡಳಿತ ನಡೆಸಬೇಕಾಗಿದೆ.

ಈ ಮಧ್ಯೆ, ಆಫ್ಘಾನಿಸ್ತಾನದ ಪಂಜ್‌ಶಿರ್ ಕಣಿವೆಗೆ ಪಲಾಯನ ಮಾಡುವ ವಿರೋಧ ಪಕ್ಷದ ನಾಯಕರು 2001 ರ ಆಕ್ರಮಣದ ಸಮಯದಲ್ಲಿ ಯುಎಸ್ ಜೊತೆ ಮೈತ್ರಿ ಮಾಡಿಕೊಂಡ ಉತ್ತರ ಒಕ್ಕೂಟದ ಬ್ಯಾನರ್ ಅಡಿಯಲ್ಲಿ ಸಶಸ್ತ್ರ ಪ್ರತಿರೋಧ ಆರಂಭಿಸುವ ಬಗ್ಗೆ ಮಾತನಾಡಿದ್ದಾರೆ.

ಪ್ರಜಾಪ್ರಭುತ್ವವನ್ನು ಅನುಸರಿಸಲು ಸಾಧ್ಯವಿಲ್ಲ, ಷರಿಯತ್ ಕಾನೂನು ಪ್ರಕಾರ ಸರ್ಕಾರ ನಡೆಸಲಾಗುವುದು ಎಂದು ತಾಲಿಬಾನ್ ಹೇಳುತ್ತಿದೆ. ಅದು ಬಿಟ್ಟರೆ ಸರ್ಕಾರ ಮುನ್ನಡೆಸಲು ತಕ್ಷಣದ ಯೋಜನೆಗಳು ತಾಲಿಬಾನೀಯರ ಮುಂದಿಲ್ಲ. ಮಾನವೀಯ ಬಿಕ್ಕಟ್ಟು ನಮ್ಮ ಕಣ್ಣಮುಂದೆ ತೆರೆದಿಟ್ಟುಕೊಂಡಿದೆ ಎಂದು ಆಫ್ಘಾನಿಸ್ತಾನದಲ್ಲಿ ವಿಶ್ವ ಆಹಾರ ಕಾರ್ಯಕ್ರಮದ ಮುಖ್ಯಸ್ಥೆ ಮೇರಿ ಎಲ್ಲೆನ್ ಮೆಕ್‌ಗ್ರೋಟಿ ಹೇಳುತ್ತಿದ್ದು, ಇದು ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ವಶವಾದ ನಂತರದ ಭೀಕರತೆಯನ್ನು ತೋರಿಸುತ್ತಿದೆ.

ಆಫ್ಘಾನಿಸ್ತಾನದ ಸ್ವಾತಂತ್ರ್ಯ ದಿನವನ್ನು ತಾಲಿಬಾನೀಯರು ಇಂದು ಘೋಷಿಸಿರುವುದು ಮಧ್ಯ ಏಷ್ಯಾದ ರಾಷ್ಟ್ರದಲ್ಲಿ ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಿದ 1919 ರ ಒಪ್ಪಂದವನ್ನು ನೆನಪಿಸುತ್ತದೆ.

ಅದೃಷ್ಟವಶಾತ್, ಇಂದು ನಾವು ಬ್ರಿಟನ್‌ನಿಂದ ಸ್ವಾತಂತ್ರ್ಯದ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ತಾಲಿಬಾನ್ ಹೇಳಿದೆ. ಅದೇ ಸಮಯದಲ್ಲಿ ನಾವು ನಮ್ಮ ಜಿಹಾದಿ ಪ್ರತಿರೋಧದ ಪರಿಣಾಮವಾಗಿ ಪ್ರಪಂಚದ ಮತ್ತೊಬ್ಬ ಅಧಿಕಾರದ ದುರಹಂಕಾರಿ ಅಮೆರಿಕ ವಿಫಲರಾಗಲು ಮತ್ತು ಅಫ್ಘಾನಿಸ್ತಾನದ ಪವಿತ್ರ ನೆಲದಿಂದ ಹಿಮ್ಮೆಟ್ಟಿಸುವಲ್ಲಿ ನಾವು ಸಫಲರಾಗಿದ್ದೇವೆ ಎಂದಿದ್ದಾರೆ.

ಈ ಮಧ್ಯೆ ಹೇಳಿಕೆ ನೀಡಿರುವ ಅಫ್ಘಾನಿಸ್ತಾನ ಹಂಗಾಮಿ ಅಧ್ಯಕ್ಷ ಅಮ್ರುಲ್ಲಾ ಸಲೇಹ್, ರಾಷ್ಟ್ರಗಳು ಕಾನೂನಿನ ನಿಯಮವನ್ನು ಗೌರವಿಸಬೇಕು, ಹಿಂಸೆಯನ್ನು ಅಲ್ಲ. ಆಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಬೇಕೆಂದು ಪಾಕಿಸ್ತಾನ ಬಯಸಿದರೆ ಅದು ಸಾಧ್ಯವಿಲ್ಲ ತುಂಬಾ ದೊಡ್ಡದಾಗಿದೆ ಮತ್ತು ತಾಲಿಬಾನೀಯರಿಗೆ ಆಡಳಿತ ನಡೆಸಲಾಗದಷ್ಟು ದೊಡ್ಡದಾಗಿದೆ. ನಿಮ್ಮ ಇತಿಹಾಸದಲ್ಲಿ ಅವಮಾನ ಮತ್ತು ಭಯೋತ್ಪಾದಕ ಗುಂಪುಗಳಿಗೆ ತಲೆಬಾಗುವುದರ ಕುರಿತು ಒಂದು ಅಧ್ಯಾಯವಾಗಲು ಬಿಡಬೇಡಿ ಎಂದಿದ್ದಾರೆ.

'ಇಸ್ಲಾಮಿಕ್ ಎಮಿರೇಟ್ ಆಫ್ ಆಫ್ಘಾನಿಸ್ತಾನ್'  ಘೋಷಣೆ
ಆಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ ಸ್ಥಾಪಿಸಿರುವುದಾಗಿ ತಾಲಿಬಾನ್ ಗುರುವಾರ ಘೋಷಿಸಿದೆ. ದೇಶದ ಸ್ವಾತಂತ್ರ್ಯದ 102 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಹೈದ್ ತನ್ನ ಟ್ವಿಟರ್ ಖಾತೆಯಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. " ಬ್ರಿಟಿಷ್ ಆಳ್ವಿಕೆಯಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದ 102 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ (ಇಸ್ಲಾಮಿಕ್ ಎಮಿರೇಟ್ ಆಫ್ ಆಫ್ಘಾನಿಸ್ತಾನ್) ಘೋಷಣೆ " ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಮೂಲಭೂತವಾದಿ ಗುಂಪು ಹೊಸ ಸರ್ಕಾರದ ರಚನೆಯನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಹೇಳಿದ್ದು, ಅದನ್ನು ಶರಿಯಾ ಕಾನೂನುಗಳ ಪ್ರಕಾರ ನಡೆಸಲಾಗುವುದು ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com