ಓಮಿಕ್ರಾನ್, ಡೆಲ್ಟಾ ಪ್ರಕರಣಗಳ ಸುನಾಮಿಯಿಂದ ಆರೋಗ್ಯ ವ್ಯವಸ್ಥೆ ಕುಸಿತ: ಡಬ್ಲ್ಯೂಎಚ್ ಒ ಎಚ್ಚರಿಕೆ

 ಓಮಿಕ್ರಾನ್ ಸುನಾಮಿ ಮತ್ತು  ಡೆಲ್ಟಾ ಕೋವಿಡ್ -19 ಪ್ರಕರಣಗಳು ಈಗಾಗಲೇ  ತಮ್ಮ ಮಿತಿಯನ್ನು ಮೀರಿದ್ದು,  ಆರೋಗ್ಯ ವ್ಯವಸ್ಥೆಗಳ ಮೇಲೆ ಒತ್ತಡ ಹಾಕಲಿವೆ  ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಎಚ್ಚರಿಸಿದೆ.
ವಿಶ್ವ ಆರೋಗ್ಯ ಮುಖ್ಯಸ್ಥ ಟೆಡ್ರೋಸ್
ವಿಶ್ವ ಆರೋಗ್ಯ ಮುಖ್ಯಸ್ಥ ಟೆಡ್ರೋಸ್
Updated on

ಜಿನಿವಾ: ಓಮಿಕ್ರಾನ್ ಸುನಾಮಿ ಮತ್ತು  ಡೆಲ್ಟಾ ಕೋವಿಡ್ -19 ಪ್ರಕರಣಗಳು ಈಗಾಗಲೇ  ತಮ್ಮ ಮಿತಿಯನ್ನು ಮೀರಿದ್ದು,  ಆರೋಗ್ಯ ವ್ಯವಸ್ಥೆಗಳ ಮೇಲೆ ಒತ್ತಡ ಹಾಕಲಿವೆ  ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಎಚ್ಚರಿಸಿದೆ.

ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು ಅವಳಿ ಬೆದರಿಕೆಗಳು ಎಂದು ಡಬ್ಲ್ಯುಎಚ್‌ಒ ಕಳವಳ ವ್ಯಕ್ತಪಡಿಸಿದ್ದು,  ಇದು ಹೊಸ ಪ್ರಕರಣಗಳ ಸಂಖ್ಯೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಿದ್ದು, ಇದು ಆಸ್ಪತ್ರೆಗೆ ದಾಖಲಾಗುವವರು ಮತ್ತು ಸಾವುಗಳಲ್ಲಿ ಏರಿಕೆಗೆ ಕಾರಣವಾಗುತ್ತದೆ ಎಂದು ಹೇಳಿದೆ. 

ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಸಂಖ್ಯೆ ದಿಢೀರ್ ಏರಿಕೆ: ಬೆಂಗಳೂರಿನಲ್ಲಿ 400 ಸೇರಿ 566 ಮಂದಿಗೆ ಪಾಸಿಟಿವ್, 6 ಸಾವು!
ಡೆಲ್ಟಾದಂತೆಯೇ ಓಮಿಕ್ರಾನ್ ಹೆಚ್ಚಾಗಿ ಹರಡುತ್ತದೆ. ಇದು ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂಬ ತೀವ್ರ ಕಳವಳ ಹೊಂದಿರುವುದಾಗಿ ಡಬ್ಲ್ಯೂಎಚ್ ಒ ಮುಖ್ಯಸ್ಛ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಸುದ್ದಿಗೋಷ್ಛಿಯಲ್ಲಿ  ತಿಳಿಸಿದರು. 

ಇದು ಆರೋಗ್ಯ ಕಾರ್ಯಕರ್ತರು ಮತ್ತು ಕುಸಿತದ ಅಂಚಿನಲ್ಲಿರುವ ಆರೋಗ್ಯ ವ್ಯವಸ್ಥೆ ಮೇಲೆ ತೀವ್ರ ಒತ್ತಡವನ್ನು ಮುಂದುವರೆಸಲಿದೆ ಎಂದು ಅವರು ಹೇಳಿದ್ದಾರೆ.  ಆರೋಗ್ಯ ವ್ಯವಸ್ಥೆಗಳ ಮೇಲಿನ ಒತ್ತಡವು ಹೊಸ ಕರೋನವೈರಸ್ ರೋಗಿಗಳಿಗೆ ಮಾತ್ರವಲ್ಲ, ಹೆಚ್ಚಿನ ಸಂಖ್ಯೆಯ ಆರೋಗ್ಯ ಕಾರ್ಯಕರ್ತರು ಕೋವಿಡ್‌ನಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ಅವರು ಹೇಳಿದರು. ಲಸಿಕೆ ಹಾಕಿಸಿಕೊಳ್ಳದ ಅನೇಕ ಜನರು ಈ ಸೋಂಕಿನಿಂದ ಸಾಯುವ ಪರಿಸ್ಥಿತಿ ಹೆಚ್ಚಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com