

ವಾಷಿಂಗ್ಟನ್: ಭಾರತೀಯ ಮೂಲದ ಜಸ್ಟಿನ್ ನಾರಾಯಣ್ 13ನೇ ಆವೃತ್ತಿಯ ಜನಪ್ರಿಯ ಟಿವಿ ಕುಕ್ಕಿಂಗ್ ಶೋ 'ಮಾಸ್ಟರ್‌ಶೆಫ್ ಆಸ್ಟ್ರೇಲಿಯಾ' ಪ್ರಶಸ್ತಿ ಗೆದ್ದಿದ್ದಾರೆ.
ಗೆಲುವಿನ ನಂತರ, ಅವರು ತಮ್ಮಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಬಹುಮಾನದ ವಿಷಯದಲ್ಲಿ, ಮಾಸ್ಟರ್‌ಶೆಫ್ ಟ್ರೋಫಿಯೊಂದಿಗೆ ಜಸ್ಟಿನ್250,000 ಯುಎಸ್ ಡಾಲರ್ (ಅಂದಾಜು ರೂ 1.86 ಕೋಟಿ) ನಗದು ಬಹುಮಾನವನ್ನೂ ಅವರು ಜಯಿಸಿದ್ದಾರೆ.
ಜಸ್ಟಿನ್ ಗೆಲುವಿನ ಸುದ್ದಿಯನ್ನು 'ಮಾಸ್ಟರ್‌ಶೆಫ್ ಆಸ್ಟ್ರೇಲಿಯಾ'ದ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿಯೂ ಪ್ರಕಟಿಸಲಾಗಿದೆ.
ಆವೃತ್ತಿಯ ಕೊನೆಯ ಸುತ್ತಿನಲ್ಲಿ ಇನ್ನೊಬ್ಬ ಭಾರತೀಯ ಸ್ಪರ್ಧಿ ದೀಪೇಂದರ್ ಚಿಬ್ಬರ್ ಕೂಡ ಇದ್ದರು.