ಇಸ್ರೇಲ್ ಪಡೆಗಳ ಘರ್ಷಣೆ: 350 ಪ್ಯಾಲೆಸ್ತೀನಿಯರಿಗೆ ಗಾಯ

ಪೂರ್ವ ಜೆರುಸಲೆಮ್ ನಲ್ಲಿ ನಡೆಯುತ್ತಿರುವ ಅಶಾಂತಿ, ಹಿಂಸಾಚಾರ  ಘಟನೆಯಲ್ಲಿ  ಕನಿಷ್ಠ 360 ಪ್ಯಾಲೆಸ್ತೀನಿಯರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ರೆಡ್ ಕ್ರೆಸೆಂಟ್ ವರದಿ ತಿಳಿಸಿದೆ.
ಇಸ್ರೇಲ್ ಪಡೆಯೊಂದಿಗಿನ ಘರ್ಷಣೆಯ ಚಿತ್ರ
ಇಸ್ರೇಲ್ ಪಡೆಯೊಂದಿಗಿನ ಘರ್ಷಣೆಯ ಚಿತ್ರ
Updated on

ಟೆಲ್ ಅವೀವ್ : ಪೂರ್ವ ಜೆರುಸಲೆಮ್ ನಲ್ಲಿ ನಡೆಯುತ್ತಿರುವ ಅಶಾಂತಿ, ಹಿಂಸಾಚಾರ  ಘಟನೆಯಲ್ಲಿ  ಕನಿಷ್ಠ 360 ಪ್ಯಾಲೆಸ್ತೀನಿಯರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ರೆಡ್ ಕ್ರೆಸೆಂಟ್ ವರದಿ ತಿಳಿಸಿದೆ.

ಗಾಜಾ ಪ್ರದೇಶದಲ್ಲಿ 100 ಕ್ಕೂಹೆಚ್ಚು  ವೆಸ್ಟ್ ಬ್ಯಾಂಕ್ ನಲ್ಲಿ 900 ಜನರು ಗಾಯಗೊಂಡಿದ್ದಾರೆ. ಹಲವು ಪ್ಯಾಲೆಸ್ತೀನಿ ಕುಟುಂಬಗಳನ್ನು  ಈ ಪ್ರದೇಶದಿಂದ ಹೊರಹಾಕುವ ಇಸ್ರೇಲ್ ನ್ಯಾಯಾಲಯದ ತೀರ್ಪಿನ ವಿರುದ್ದ  ಪೂರ್ವ ಜೆರುಸಲೆಮ್ ನಲ್ಲಿ ಅಶಾಂತಿ, ಹಿಂಸಾಚಾರದ ಘಟನೆಗಳು  ನಡೆಯುತ್ತಿವೆ.

ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯರ ಗಾಜಾ ಪ್ರದೇಶದ ನಡುವಿನ ಗಡಿಯಲ್ಲಿನ ಪರಿಸ್ಥಿತಿ ಕಳೆದ ಒಂದು ವಾರದಿಂದ ಹದಗೆಡುತ್ತಿದೆ. ಕಳೆದ ದಿನಗಳಲ್ಲಿ  ಗಾಜಾದಿಂದ ಒಟ್ಟು 2,800 ರಾಕೆಟ್ ಗಳನ್ನು ಇಸ್ರೇಲ್ ಕಡೆಗೆ ಹಾರಿಸಲಾಗಿದೆ ಎಂದು ಇಸ್ರೇಲ್ ಸೇನೆ ಶನಿವಾರ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com