ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಭೀಕರ ದೃಶ್ಯ: ಪ್ರಾಣ ಉಳಿಸಿಕೊಳ್ಳಲು ವಿಮಾನದ ಟೈರ್ ಮೇಲೆ ಹತ್ತಿದ ಅಫ್ಗಾನ್ ನಾಗರಿಕರು, ಕೆಳಗೆ ಬಿದ್ದು ಸಾವು, ವಿಡಿಯೋ!

ಅಘ್ಘಾನಿಸ್ತಾನ ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿದೆ. ಇನ್ನು ತಾಲಿಬಾನಿಗಳ ಅಟ್ಟಹಾಸಕ್ಕೆ ಹೆದರಿ ಅಲ್ಲಿನ ಸಿರಿವಂತರು ಸೇರಿದಂತೆ ನಾಗರಿಕರು ದೇಶವನ್ನು ತೊರೆಯಲು ಮುಂದಾಗಿದ್ದಾರೆ. ಹೀಗಾಗಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾವಿರಾರೂ ಸಂಖ್ಯೆಯಲ್ಲಿ ಜನರು ದಾಂಗುಡಿ ಇಟ್ಟಿದ್ದಾರೆ. 

ಕಾಬೂಲ್: ಅಘ್ಘಾನಿಸ್ತಾನ ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿದೆ. ಇನ್ನು ತಾಲಿಬಾನಿಗಳ ಅಟ್ಟಹಾಸಕ್ಕೆ ಹೆದರಿ ಅಲ್ಲಿನ ಸಿರಿವಂತರು ಸೇರಿದಂತೆ ನಾಗರಿಕರು ದೇಶವನ್ನು ತೊರೆಯಲು ಮುಂದಾಗಿದ್ದಾರೆ. ಹೀಗಾಗಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾವಿರಾರೂ ಸಂಖ್ಯೆಯಲ್ಲಿ ಜನರು ದಾಂಗುಡಿ ಇಟ್ಟಿದ್ದಾರೆ. 

ಅಲ್ಲದೆ ಟೇಕಾಫ್ ಆಗುತ್ತಿರುವ ಇತರ ದೇಶದ ವಿಮಾನಗಳನ್ನು ಹತ್ತಲು ಮುಗಿಬಿದ್ದಿದ್ದಾರೆ. ಇನ್ನು ಇಂದು ಅಮೆರಿಕಾದ ವಿಮಾನವನ್ನು ಹತ್ತಲು ಪ್ರಯತ್ನಿಸಿ ವಿಫಲವಾದ ಕೆಲ ಆಫ್ಘಾನ್ ನಾಗರಿಕರು ವಿಮಾನದ ಟೈರ್ ಮೇಲೆ ಹತ್ತಿ ಕುಳಿತುಕೊಂಡರು. 

 ವಿಮಾನ ಆಗಸಕ್ಕೆ ಚಿಮ್ಮಿದ ನಂತರ ಮಧ್ಯಭಾಗದಿಂದ ಇಬ್ಬರು ಕೆಳಗೆ ಬೀಳುತ್ತಿರುವ ಭೀಕರ ದೃಶ್ಯ ಸೆರೆಯಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com