ಬುರುಂಡಿ ಕಾರಾಗೃಹದ ಬೆಂಕಿಯಲ್ಲಿ 38 ಮಂದಿ ಸಜೀವ ದಹನ: 69 ಮಂದಿಗೆ ಗಂಭೀರ ಗಾಯ

ಬುರುಂಡಿಯಲ್ಲಿ ಕಿಕ್ಕಿರಿದು ತುಂಬಿದ್ದ ಕಾರಾಗೃಹದಲ್ಲಿ ಇಂದು ಬೆಳಗಿನ ಜಾವದ ವೇಳೆಗೆ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು 38 ಮಂದಿ ಸಜೀವ ದಹನವಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗೀತೇಗಾ: ಬುರುಂಡಿಯಲ್ಲಿ ಕಿಕ್ಕಿರಿದು ತುಂಬಿದ್ದ ಕಾರಾಗೃಹದಲ್ಲಿ ಇಂದು ಬೆಳಗಿನ ಜಾವದ ವೇಳೆಗೆ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು 38 ಮಂದಿ ಸಜೀವ ದಹನವಾಗಿದ್ದಾರೆ. 

ಆ ಸಮಯದಲ್ಲಿ ಅನೇಕ ಕೈದಿಗಳು ಇನ್ನೂ ಮಲಗಿದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವಿಸುವ ಭೀತಿ ಎದುರಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದಾಗಲೇ 38 ಕೈದಿಗಳು ಸಾವನ್ನಪ್ಪಿದ್ದಾರೆ. 69 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.

ಅಗ್ನಿ ಅವಘಡಕ್ಕೆ ಕಾರಣ ತಕ್ಷಣ ತಿಳಿದುಬಂದಿಲ್ಲ. ಘಟನೆಯ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಗಾಯಾಳುಗಳನ್ನು ಪೊಲೀಸ್ ಮತ್ತು ಆರ್ಮಿ ಪಿಕ್-ಅಪ್ ಟ್ರಕ್‌ಗಳಲ್ಲಿ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ಬುರುಂಡಿಯ ರೆಡ್‌ಕ್ರಾಸ್‌ನ ತಂಡಗಳು ಘಟನಾ ಸ್ಥಳದಲ್ಲಿದ್ದು, ಬೆಂಕಿಯನ್ನು ಈಗ ನಿಯಂತ್ರಣಕ್ಕೆ ತರಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com