The New Indian Express
ಹ್ಯೂಸ್ಟನ್: ಅಮೆರಿಕದ ಹ್ಯೂಸ್ಟನ್ ನಗರದ ಪೋಸ್ಟಾಫೀಸ್ ಒಂದಕ್ಕೆ ಭಾರತೀಯ ಮೂಲದ ಸಿಖ್ ಪೊಲೀಸ್ ಅಧಿಕಾರಿ ಸಂದೀಪ್ ಸಿಂಗ್ ದಲಿವಾಲ್ ಅವರ ಹೆಸರನ್ನಿಟ್ಟು ಅವರಿಗೆ ಗೌರವ ಸೂಚಿಸಲಾಗಿದೆ.
ಇದನ್ನೂ ಓದಿ: ಅಪಾಯ ಲೆಕ್ಕಿಸದೆ ಮುಳುಗುತ್ತಿರುವವರ ರಕ್ಷಿಸುವ ಆಪತ್ಬಾಂಧವ, ಮುಳುಗುತಜ್ಞ ಉಡುಪಿಯ ಆಕ್ವಾಮ್ಯಾನ್ ಈಶ್ವರ್ ಮಲ್ಪೆ
ಮೂರು ಮಕ್ಕಳ ತಂದೆಯಾಗಿದ್ದ ಸಂದೀಪ್ ಸಿಂಗ್ ಹ್ಯೂಸ್ಟನ್ ನಗರದ ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2017ರಲ್ಲಿ ರಸ್ತೆಯಲ್ಲೇ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅವರ ಗೌರವಾರ್ಥ ಪೋಸ್ಟಾಫೀಸಿಗೆ ಅವರ ಹೆಸರಿಡಲಾಗಿದೆ.
ಇದನ್ನೂ ಓದಿ: ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯಿಂದ ಹಲವು ಮಂದಿಗೆ ಜೀವದಾನ: ಅಂತಿಮ ಕ್ಷಣದ ಆಪದ್ಬಾಂಧವ
ಪಗಡಿ ತೊಟ್ಟು ಪೊಲೀಸ್ ಕರ್ತವ್ಯ ನಿರ್ವಹಿಸಿದ ಮೊದಲ ವ್ಯಕ್ತಿ ಎನ್ನುವ ಕೀರ್ತಿಗೆ ಸಂದೀಪ್ ಸಿಂಗ್ ಪಾತ್ರರಾಗಿದ್ದರು. ಪಗಡಿ ಮತ್ತು ದಾಡಿ ಬಿಟ್ಟುಕೊಂಡು ಕರ್ತವ್ಯ ನಿರ್ವಹಿಸಲು ಪೊಲೀಸ್ ಇಲಾಖೆ ೨೦೧೫ರಲ್ಲಿ ಅವರಿಗೆ ಅನುಮತಿ ನೀಡಿತ್ತು. ಆಗ ದೇಶಾದ್ಯಂತ ಸಿಂಗ್ ಸುದ್ದಿಯಾಗಿದ್ದರು.
ಇದನ್ನೂ ಓದಿ: ಜಿಂಕೆಗಳಿಗಾಗಿ 45 ಎಕರೆ ಭೂಮಿ ಮೀಸಲಿಟ್ಟ ರೈತ: ಕಳೆದ 20 ವರ್ಷಗಳಲ್ಲಿ ಜಿಂಕೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳ