5 ವರ್ಷಗಳಿಂದ ಕರಾಚಿ ಜೈಲಿನಲ್ಲಿದ್ದ 20 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕಿಸ್ತಾನ

ಸದ್ಭಾವನೆಯ ಸೂಚಕವಾಗಿ ಪಾಕಿಸ್ತಾನ 20 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ. ಈ ಮೀನುಗಾರರು 5 ವರ್ಷಗಳಿಂದ ಕರಾಚಿಯಲ್ಲಿದ್ದರು. 
ಪಾಕಿಸ್ತಾನದ ಧ್ವಜ
ಪಾಕಿಸ್ತಾನದ ಧ್ವಜ

ನವದೆಹಲಿ: ಸದ್ಭಾವನೆಯ ಸೂಚಕವಾಗಿ ಪಾಕಿಸ್ತಾನ 20 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ. ಈ ಮೀನುಗಾರರು 5 ವರ್ಷಗಳಿಂದ ಕರಾಚಿಯಲ್ಲಿದ್ದರು. 

ಪಾಕಿಸ್ತಾನಕ್ಕೆ ಸೇರಿದ ನೀರಿನ ಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ್ದ ಹಿನ್ನೆಲೆಯಲ್ಲಿ 20 ಮೀನುಗಾರರನ್ನು ಬಂಧಿಸಲಾಗಿತ್ತು.

ಈ 20 ಮೀನುಗಾರರನ್ನು ಕರಾಚಿಯ ಮಲಿರ್ ಜಿಲ್ಲೆಯ ಜೈಲಿನಲ್ಲಿರಿಸಲಾಗಿತ್ತು. ಬಳಿಕ ವಾಘಾ ಗಡಿಯ ಮೂಲಕ ಭಾರತಕ್ಕೆ ಕಳಿಸಲಾಗುತ್ತಿದೆ. ಪಾಕಿಸ್ತಾನದ ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com