ಅಮೆರಿಕಾ: ತೆಲಂಗಾಣದ ಸಾಫ್ಟ್‌ವೇರ್ ಉದ್ಯೋಗಿಗೆ ಗುಂಡಿಕ್ಕಿ ಹತ್ಯೆ!

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಸಾಫ್ಟ್‌ವೇರ್ ಉದ್ಯೋಗಿ ಸಾಯಿ ಚರಣ್ ನಕ್ಕ (25) ಅವರನ್ನು ಭಾನುವಾರ ಸಂಜೆ ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಗುಂಡಿಗೆ ಬಲಿಯಾದ ಸಾಯಿ ಚರಣ್ ನಕ್
ಗುಂಡಿಗೆ ಬಲಿಯಾದ ಸಾಯಿ ಚರಣ್ ನಕ್
Updated on

ಹೈದರಾಬಾದ್: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಸಾಫ್ಟ್‌ವೇರ್ ಉದ್ಯೋಗಿ ಸಾಯಿ ಚರಣ್ ನಕ್ಕ (25) ಅವರನ್ನು ಭಾನುವಾರ ಸಂಜೆ ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಅಮೆರಿಕದ ಮೇರಿಲ್ಯಾಂಡ್‌ನ ಕ್ಯಾಟನ್ಸ್‌ವಿಲ್ಲೆ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಾಯಿ ಚರಣ್ ಅವರನ್ನು ಕಪ್ಪು ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ತನ್ನ ಸ್ನೇಹಿತನನ್ನು ವಿಮಾನ ನಿಲ್ದಾಣದಲ್ಲಿ ಇಳಿಸಿ ಹಿಂತಿರುಗುತ್ತಿದ್ದ ವೇಳೆ ಘಟನೆ ನಡೆದಿದೆ.

ಕೂಡಲೇ ಅವರನ್ನು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಆರ್. ಆಡಮ್ಸ್ ಕೌಲಿ ಶಾಕ್ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಯಿತು, ಆದರೆ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ವೈದ್ಯರು ಅವರ ತಲೆಯ ಮೇಲೆ ಗುಂಡೇಟಿನಿಂದ ಗಾಯವಾಗಿತ್ತು. ನಲ್ಗೊಂಡದ ನಿವೃತ್ತ ಶಿಕ್ಷಕ ನರಸಿಂಹ ಅವರ ಪುತ್ರ ಚರಣ್ ಕಳೆದ ಎರಡು ವರ್ಷಗಳಿಂದ ಬಾಲ್ಟಿಮೋರ್ ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com