ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಯಿಂದ ಭಾರತವನ್ನು ಹೊರಗಿಟ್ಟ ಅಮೇರಿಕ ವಿರುದ್ಧ ಪಾಕ್ ಅಸಮಾಧಾನ

ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಯಿಂದ ಭಾರತವನ್ನು ಹೊರಗಿಟ್ಟಿರುವ ಅಮೇರಿಕಾದ ನಿರ್ಧಾರವನ್ನು ಪಾಕಿಸ್ತಾನ ಪ್ರಶ್ನಿಸಿದೆ.
ಪಾಕಿಸ್ತಾನ-ಬೈಡೆನ್
ಪಾಕಿಸ್ತಾನ-ಬೈಡೆನ್

ನವದೆಹಲಿ: ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಯಿಂದ ಭಾರತವನ್ನು ಹೊರಗಿಟ್ಟಿರುವ ಅಮೇರಿಕಾದ ನಿರ್ಧಾರವನ್ನು ಪಾಕಿಸ್ತಾನ ಪ್ರಶ್ನಿಸಿದೆ.

ಪಾಕಿಸ್ತಾನವನ್ನು ಅಮೇರಿಕ ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಗೆ ಸೇರಿಸಿದ್ದು, ಈ ಪಟ್ಟಿ ಪಾಕಿಸ್ತಾನದ ವಾಸ್ತವಗಳಿಂದ ಬೇರೆಯದ್ದೇ ಆಗಿದೆ ಎಂದು ಹೇಳಿದೆ.
 
ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಝಾರ ಬಲೂಚ್ ಈ ಹೇಳಿಕೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನ ಬಹು ಧರ್ಮೀಯ ದೇಶವಾಗಿದ್ದು, ಬಹುತ್ವದ ಸಮಾಜವಾಗಿದೆ, ಅನ್ಯ ಮತಗಳೆಡೆಗೆ ಸೌಹಾರ್ದತೆಯ ಶ್ರೀಮಂತ ಪರಂಪರೆ ಹೊಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಧಾರ್ಮಿಕ ಸ್ವಾತಂತ್ರ್ಯವೆಂದರೆ ಇತರರನ್ನು ಮತಾಂತರ ಮಾಡುವ ಹಕ್ಕು ಅಲ್ಲ: ಸುಪ್ರೀಂ ಗೆ ಕೇಂದ್ರ
 
ಕಳೆದ ವಾರ ಅಮೇರಿಕ ಪಾಕಿಸ್ತಾನ, ಚೀನಾ, ಕ್ಯೂಬಾ, ನಿಕರಾಗುವಾ ಸೇರಿದಂತೆ ಅನೇಕ ರಾಷ್ಟ್ರಗಳನ್ನು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಪರಿಸ್ಥಿತಿಯಲ್ಲಿರುವ ದೇಶಗಳ ಪಟ್ಟಿಗೆ ಸೇರಿಸಿತ್ತು. ಅಮೇರಿಕಾದ ಈ ನಿರ್ಧಾರಕ್ಕೆ ಪಾಕಿಸ್ತಾನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಏಕಪಕ್ಷೀಯ ನಿರ್ಧಾರ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com