ಬೋರಿಸ್ ಜಾನ್ಸನ್ ಮತ್ತೊಮ್ಮೆ ಪ್ರಧಾನಿಯಾಗಲು ಮಾಜಿ ಸಚಿವೆ ಪ್ರೀತಿ ಪಟೇಲ್ ಬೆಂಬಲ! 

ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತೊಮ್ಮೆ ಪ್ರಧಾನಿಯಾಗುವುದಕ್ಕೆ ಮಾಜಿ ಗೃಹ ಸಚಿವೆ ( ಗೃಹ ಕಾರ್ಯದರ್ಶಿ) ಪ್ರೀತಿ ಪಟೇಲ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೋರಿಸ್ ಜಾನ್ಸನ್
ಬೋರಿಸ್ ಜಾನ್ಸನ್

ಲಂಡನ್:  ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತೊಮ್ಮೆ ಪ್ರಧಾನಿಯಾಗುವುದಕ್ಕೆ ಮಾಜಿ ಗೃಹ ಸಚಿವೆ ( ಗೃಹ ಕಾರ್ಯದರ್ಶಿ) ಪ್ರೀತಿ ಪಟೇಲ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರೀತಿ ಪಟೇಲ್ ಬೋರಿಸ್ ಜಾನ್ಸನ್ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಲಿಜ್ ಟ್ರಸ್ ಅವರ ಬದಲಿಗೆ ಪ್ರಧಾನಿಯಾಗುವುದಕ್ಕೆ ಜಾನ್ಸನ್ ಅವರೇ ಸೂಕ್ತ ಅಭ್ಯರ್ಥಿ ಎಂದು ಪ್ರೀತಿ ಪಟೇಲ್ ಹೇಳಿದ್ದಾರೆ. 

ಪ್ರೀತಿ ಪಟೇಲ್ ಭಾರತೀಯ ಮೂಲದ ಸಂಸದರಾಗಿದ್ದು, ಈ ಹಿಂದೆ ಬೋರಿಸ್ ಜಾನ್ಸನ್ ಬಳಿಕ ಪ್ರಧಾನಿ ಯಾರಾಗಬೇಕೆಂಬ ಪ್ರಶ್ನೆ ಮೂಡಿದಾಗ ತಮ್ಮ ಆಯ್ಕೆಯ ಅಭ್ಯರ್ಥಿ ಬಗ್ಗೆ ಮೌನವಾಗಿದ್ದರು. ಅಷ್ಟೇ ಅಲ್ಲದೇ 2019 ರ ಚುನಾವಣೆಯಲ್ಲಿ ಜಾನ್ಸನ್ ಗೆ ಸ್ಪಷ್ಟ ಬಹುಮತವಿದೆ ಎಂದು ಹೇಳಿದ್ದರು. 

ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಅತ್ಯಂತ ಮಹತ್ವದ ನಿರ್ಧಾರಗಳನ್ನು ಸರಿಯಾಗಿ  ತೆಗೆದುಕೊಂಡು, ಸಾಬೀತಾಗಿರುವ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ ಎಂದು ಪ್ರೀತಿ ಪಟೇಲ್ ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

ಟ್ರಸ್ ಬದಲಿಗೆ ಪ್ರಧಾನಿಯಾಗಬಲ್ಲ ಅಭ್ಯರ್ಥಿಗಳ ಪಟ್ಟಿಯಲ್ಲಿ ರಿಷಿ ಸುನಕ್ ಹೆಸರು ಮತ್ತೊಮ್ಮೆ ಮುಂಚೂಣಿಯಲ್ಲಿದೆ. ಈ ನಡುವೆ ಜಾನ್ಸನ್ ತಮ್ಮ ಕೆರಿಬಿಯನ್ ಪ್ರವಾಸದಿಂದ ಬ್ರಿಟನ್ ಗೆ ಆಗಮಿಸಿದ್ದು ಮತ್ತೊಮ್ಮೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ ಈ ನಡುವೆ ಪ್ರೀತಿ ಪಟೇಲ್ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ.

ಜಾನ್ಸನ್ 6 ವಾರಗಳ ಹಿಂದೆಯಷ್ಟೇ ಜಾನ್ಸನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com