ಲಂಡನ್: ಹೈದರಾಬಾದ್ ಮೂಲದ ವಿದ್ಯಾರ್ಥಿನಿಯನ್ನು ಇರಿದು ಕೊಂದ ಬ್ರೆಜಿಲ್ ವ್ಯಕ್ತಿ!

ಲಂಡನ್ ನಲ್ಲಿ ಹೈದರಾಬಾದ್ ಮೂಲದ ವಿದ್ಯಾರ್ಥಿನಿಯನ್ನು ಇರಿದು ಹತ್ಯೆ ಮಾಡಲಾಗಿದೆ.
ಮೃತ ವಿದ್ಯಾರ್ಥಿನಿ ತೇಜಸ್ವಿನಿ ರೆಡ್ಡಿ
ಮೃತ ವಿದ್ಯಾರ್ಥಿನಿ ತೇಜಸ್ವಿನಿ ರೆಡ್ಡಿ

ಲಂಡನ್: ಲಂಡನ್ ನಲ್ಲಿ ಹೈದರಾಬಾದ್ ಮೂಲದ ವಿದ್ಯಾರ್ಥಿನಿಯನ್ನು ಇರಿದು ಹತ್ಯೆ ಮಾಡಲಾಗಿದೆ.

ವೆಂಬ್ಲೇ ನಲ್ಲಿ ಈ ದುರ್ಘಟನೆ ವರದಿಯಾಗಿದ್ದು, ತೇಜಸ್ವಿನಿ ರೆಡ್ಡಿ ಮೃತ ದುರ್ದೈವಿಯಾಗಿದ್ದಾರೆ. ಆಕೆ ಉನ್ನತ ಶಿಕ್ಷಣಕ್ಕಾಗಿ ಲಂಡನ್ ಗೆ ತೆರಳಿದ್ದರು. ವಾಸಸ್ಥಳದ ಬಳಿ ಬ್ರೆಜಿಲ್ ನ ವ್ಯಕ್ತಿಯೋರ್ವ ಆಕೆಯನ್ನು ಇರಿದು ಹತ್ಯೆ ಮಾಡಿದ್ದಾನೆ. ರಕ್ತಸ್ರಾವದ ತೀವ್ರತೆಗೆ ತೇಜಸ್ವಿನಿ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೆಟ್ರೋಪಾಲಿಟನ್ ಪೊಲೀಸರ ಪ್ರಕಾರ ಮತ್ತೋರ್ವ ಮಹಿಳೆ 28 ವರ್ಷದ ಮಹಿಳೆಗೂ ಇರಿತದ ಗಾಯಗಳಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

"24 ವರ್ಷದ ಪುರುಷ ಮತ್ತು 23 ವರ್ಷದ ಮಹಿಳೆ ಇಬ್ಬರನ್ನು ಕೊಲೆಯ ಶಂಕೆಯ ಮೇಲೆ ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ. ಮುಂದಿನ ಕ್ರಮ ಕೈಗೊಳ್ಳದೇ ಮಹಿಳೆಯನ್ನು ಬಿಡುಗಡೆ ಮಾಡಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ. 23 ವರ್ಷದ ಮತ್ತೊಬ್ಬ ಶಂಕಿತ ಯುವಕನನ್ನೂ ಈಗ ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com