Canada Shooting: ಭಾರತ ಮೂಲದ ಉದ್ಯಮಿ ಸೇರಿ ಕುಟುಂಬದ 3 ಮಂದಿ ಸಾವು

ಕೆನಡಾದಲ್ಲಿ ನಡೆದ ಶೂಟೌಟ್ ನಲ್ಲಿ ಭಾರತ ಮೂಲದ ಉದ್ಯಮಿ ಸೇರಿ ಕುಟುಂಬದ 3 ಮಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆನಡಾ ಶೂಟಿಂಗ್
ಕೆನಡಾ ಶೂಟಿಂಗ್

ಒಟ್ಟಾವಾ: ಕೆನಡಾದಲ್ಲಿ ನಡೆದ ಶೂಟೌಟ್ ನಲ್ಲಿ ಭಾರತ ಮೂಲದ ಉದ್ಯಮಿ ಸೇರಿ ಕುಟುಂಬದ 3 ಮಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆನಡಾದ ಅಲ್ಬೆರ್ಟಾ ಪ್ರಾಂತ್ಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ನಿರ್ಮಾಣ ಉದ್ಯಮಿ ಸೇರಿ ಇಬ್ಬರು ಮೃತಪಟ್ಟಿದ್ದು, ಮತ್ತೊರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಬೆರ್ಟಾ ಪ್ರಾಂತ್ಯದ ಸಮೀಪದ ಕ್ಯವನಾಹ್‌ನ ವಸತಿ ‍ಪ್ರದೇಶದಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಕೆನಡಾ ಶೂಟಿಂಗ್
ಕೆನಡಾ ಮೂಲದ ಗ್ಯಾಂಗ್​​ಸ್ಟರ್ ಗೋಲ್ಡಿ ಬ್ರಾರ್ ಭಯೋತ್ಪಾದಕ ಎಂದು ಘೋಷಿಸಿದ ಸರ್ಕಾರ

ಭಾರತ ಮೂಲದ ಉದ್ಯಮಿ ಸೇರಿ ಕುಟುಂಬದ 3 ಮಂದಿ ಸಾವು

ಈ ಶೂಟೌಟ್ ನಲ್ಲಿ 51 ವರ್ಷ ವಯಸ್ಸಿನ ಉದ್ಯಮಿ ರಾಜೀವ್ ವಾರಿಕೂ, ಅವರ ಪತ್ನಿ 47 ವರ್ಷದ ಶಿಲ್ಪಾ ಕೋಥಾ ಮತ್ತು ಅವರ 16 ವರ್ಷದ ಮಗಳು ಮಾಹೆಕ್ ವಾರಿಕೂ ಸಾವನ್ನಪ್ಪಿದ್ದಾರೆ. ಶೂಟೌಟ್ ವೇಳೆ ಉದ್ಯಮಿ ಕುಟುಂಬ ತಂಗಿದ್ದ ಮನೆಕೂಡ ಬೆಂಕಿ ಗಾಹುತಿಯಾಗಿದೆ.

ಮೃತರ ಮರಣೋತ್ತರ ಪರೀಕ್ಷೆ ಮಂಗಳವಾರ ಹಾಗೂ ಬುಧವಾರ ನಿಗದಿಯಾಗಿದೆ ಎಂದು ಹೇಳಲಾಗಿದೆ.

ಮೃತ ಉದ್ಯಮಿ ನಿರ್ಮಾಣ ಕಂಪನಿಯೊಂದರ ಮಾಲೀಕರಾಗಿದ್ದು, ಪಂಜಾಬಿ ಸಮುದಾಯಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com