ಪ್ರವಾಸಿ ವೀಸಾ ದುರುಪಯೋಗ: ಶ್ರೀಲಂಕಾದಲ್ಲಿ ಐಟಿ ವ್ಯವಹಾರ ನಡೆಸುತ್ತಿದ್ದ ಎಂಟು ಭಾರತೀಯರ ಬಂಧನ

ಪ್ರವಾಸಿ ವೀಸಾವನ್ನು ದುರುಪಯೋಗ ಪಡಿಸಿಕೊಂಡು ದ್ವೀಪ ರಾಷ್ಟ್ರದಲ್ಲಿ ಐಟಿ ವ್ಯವಹಾರ ನಡೆಸುತ್ತಿದ್ದದ್ದಕ್ಕಾಗಿ ಶ್ರೀಲಂಕಾದ ವಲಸೆ ಅಧಿಕಾರಿಗಳು ಓರ್ವ ಮಹಿಳೆ ಸೇರಿದಂತೆ ಎಂಟು ಭಾರತೀಯರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಕೊಲಂಬೊ: ಪ್ರವಾಸಿ ವೀಸಾವನ್ನು ದುರುಪಯೋಗ ಪಡಿಸಿಕೊಂಡು ದ್ವೀಪ ರಾಷ್ಟ್ರದಲ್ಲಿ ಐಟಿ ವ್ಯವಹಾರ ನಡೆಸುತ್ತಿದ್ದದ್ದಕ್ಕಾಗಿ ಶ್ರೀಲಂಕಾದ ವಲಸೆ ಅಧಿಕಾರಿಗಳು ಓರ್ವ ಮಹಿಳೆ ಸೇರಿದಂತೆ ಎಂಟು ಭಾರತೀಯರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಇತ್ತೀಚೆಗೆ ಇಲ್ಲಿನ ಸಿನ್ನಮನ್ ಗಾರ್ಡನ್ಸ್‌ನ ವಸತಿ ಪ್ರದೇಶದಲ್ಲಿ ಐಟಿ ವ್ಯವಹಾರ ನಡೆಸುತ್ತಿರುವ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ವಲಸೆ ಅಧಿಕಾರಿಗಳು ಭಾರತೀಯ ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಗಳೆಲ್ಲರೂ ಪ್ರವಾಸಿ ವೀಸಾಗಳನ್ನು ಹೊಂದಿದ್ದು, ಈ ಪೈಕಿ ಒಬ್ಬಾತನ ವೀಸಾ ಅವಧಿ ಮುಕ್ತಾಯಗೊಂಡಿದೆ. ಶ್ರೀಲಂಕಾದಲ್ಲಿ ಪ್ರವಾಸಿ ವೀಸಾಗಳ ಅಡಿಯಲ್ಲಿ ಉದ್ಯೋಗವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಪ್ರಾತಿನಿಧಿಕ ಚಿತ್ರ
ಅಕ್ರಮ ಮೀನುಗಾರಿಕೆ ಆರೋಪ: ತಮಿಳುನಾಡಿನ 18 ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ

ಬಂಧಿತ ಮಹಿಳೆ ಸೇರಿದಂತೆ ಎಂಟು ವ್ಯಕ್ತಿಗಳನ್ನು ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಗಡೀಪಾರು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ರೀತಿಯ ಘಟನೆಯು ಮಾರ್ಚ್‌ನಲ್ಲಿ ವರದಿಯಾಗಿತ್ತು. ಪ್ರವಾಸಿ ವೀಸಾಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ವೆಸ್ಟ್ ಕೋಸ್ಟ್ ರೆಸಾರ್ಟ್ ಪಟ್ಟಣವಾದ ನೆಗೊಂಬೊದಲ್ಲಿ 21 ಭಾರತೀಯರನ್ನು ಬಂಧಿಸಲಾಗಿತ್ತು.

ಭಾರತವು ಶ್ರೀಲಂಕಾದ ಅತಿ ದೊಡ್ಡ ಒಳಬರುವ ಪ್ರವಾಸೋದ್ಯಮ ಮಾರುಕಟ್ಟೆಯಾಗಿದೆ. ಸದ್ಯ, ಶ್ರೀಲಂಕಾವು ಭಾರತ, ಚೀನಾ, ಇಂಡೋನೇಷ್ಯಾ, ರಷ್ಯಾ, ಥೈಲ್ಯಾಂಡ್, ಮಲೇಷಿಯಾ ಮತ್ತು ಜಪಾನ್‌ನ ಪ್ರವಾಸಿಗರಿಗೆ ಉಚಿತ ವೀಸಾವನ್ನು ನೀಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com